ಗೌಡರ ಕುರಿತು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆಗೆ ಕ್ರಮ: ಎ.ಎಸ್.ಪೊನ್ನಣ್ಣ

ಮಡಿಕೇರಿ ಅ.31(ಕರ್ನಾಟಕ ವಾರ್ತೆ):-ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೋಟೆ ಆವರಣದಲ್ಲಿ ಗುರುವಾರ ಏರ್ಪಡಿಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
1837 ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೊರಾಡಿ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರು ಹಾಗೂ ಅಮರ ಸುಳ್ಯ ದಂಗೆ ಬಗ್ಗೆ ಈ ಹಿಂದೆ 2012 ರಿಂದ 2019 ರ ವರೆಗೆ 6 ನೇ ತರಗತಿ ರಾಜ್ಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಉಲ್ಲೇಖವಾಗಿತ್ತು ಎಂಬ ಬಗ್ಗೆ ಕೊಡಗು ಗೌಡ ಯುವ ವೇದಿಕೆ ಗಮನ ಸೆಳೆದಿದ್ದು, ಈ ಸಂಬಂಧ ಸರ್ಕರದ ಗಮನ ಸೆಳೆಯಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು, ಇತಿಹಾಸವನ್ನು ಯಾರೂ ಸಹ ತಿರುಚಲು ಸಾಧ್ಯವಿಲ್ಲ ಎಂದರು.
ಜಾತಿ, ಧರ್ಮವನ್ನು ಮೀರಿ ದೇಶಕ್ಕಾಗಿ ಪಣತೊಟ್ಟ ವೀರ ಯೋಧರನ್ನು ಸದಾ ಸ್ಮರಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗುಡ್ಡೆಮನೆ ಅಪ್ಪಯ್ಯ ಗೌಡರ ತ್ಯಾಗ, ಬಲಿದಾನ ಇತಿಹಾಸದ ಪುಟದಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರ ಚರಿತ್ರೆ ಉಳಿಸಲು ಕೈಜೋಡಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಅವರನ್ನು ಗಲ್ಲಿಗೇರಿಸಿದ ಸ್ಥಳವು ಕೋಟೆ ಆವರಣದಲ್ಲಿದ್ದು, ಈ ಜಾಗವು ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರಲಿದೆ. ಆದ್ದರಿಂದ 15*15 ಅಳತೆಯಲ್ಲಿ ಇಂಟರ್‌ಲಾಕ್ ಅಳವಡಿಸಿ ಅಭಿವೃದ್ಧಿಪಡಿಸಲು ಮುಂದಾಗಬೇಕಿದೆ ಎಂದು ಕೋರಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಇರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿಯೂ ಇಂಟರ್‌ಲಾಕ್ ಅಳವಡಿಸಿ, ಅಭಿವೃದ್ಧಿಮಾಡಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಬೇಕಿದೆ ಎಂದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ.ದಿನೇಶ್ ಅವರು ಮಾತನಾಡಿ ಗುಡ್ಡೆಮನೆ ಅಪ್ಪಯ್ಯ ಗೌಡರು ರಾಷ್ಟ್ರದಲ್ಲಿ ಸ್ವಾತಂತ್ರ್ಯ ದಂಗೆಗೂ ಮೊದಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಇವರ ಹೆಸರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.
‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಜಾತಿಯಿಂದ ಗುರ್ತಿಸಬಾರದು. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲಿಯೇ ಹೆಚ್ಚಿನ ಜಾತಿಯತೆ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.’
ಕಾಫಿ ಮಂಡಳಿ ವತಿಯಿಂದ ಹಲವು ರೀತಿಯ ಸಹಾಯ, ಸಹಕಾರ ಕಲ್ಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಿಡ್ಯಮಲೆ ಡಾ.ಎ.ಜ್ಞಾನೇಶ್ ಅವರು ಮಾತನಾಡಿ 1837 ರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗುಡ್ಡೆಮನೆ ಅಪ್ಪಯ್ಯ ಗೌಡ ಅವರು ಹಾಗೂ ಅಮರ ಸುಳ್ಯ ಕ್ರಾಂತಿಗೆ ಇತಿಹಾಸವಿದೆ ಎಂದರು.
ಗುಡ್ಡೆಮನೆ ಅಪ್ಪಯ್ಯ ಗೌಡರು ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿರುವುದನ್ನು ಯಾರು ಸಹ ಮರೆಯಬಾರದು ಎಂದು ಹೇಳಿದರು.
ಶಾಸಕದ್ವಯರಿಂದ ಪುಷ್ಪ ನಮನ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣಾ ದಿನಾಚರಣೆಯು ನಗರದ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಗುರುವಾರ ನಡೆಯಿತು.
ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ.ದಿನೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಡಿವೈಎಸ್‌ಪಿ ಮಹೇಶ್ ಕುಮಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ನಿಕಟಪೂರ್ವ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ, ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಂಬೆಕಲ್ಲು ನವೀನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯು, ಗ್ಯಾರಂಟಿ ಯೋಜನಾ ಅನುಷ್ಠಾನ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್, ಭಾರತೀಯ ಕಾಫಿ ಮಂಡಳಿ ಸದಸ್ಯರಾದ ತಳೂರು ಕಿಶೋರ್ ಕುಮಾರ್, ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾದ ಗವಿನ್,
ವಿವಿಧ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿಪ್ರಸಾದ್(ಕುಶಾಲನಗರ), ಯಂಕನ ಉಲ್ಲಾಸ(ಸುಂಟಿಕೊಪ್ಪ), ಅಯ್ಯಂಡ್ರ ರಾಘವಯ್ಯ(ಚೆಟ್ಟಳ್ಳಿ), ಮುಕ್ಕಾಟಿ ಗಣಪತಿ(ವಿರಾಜಪೇಟೆ), ಮುಕ್ಕಾಟಿ ಕುಶಾಲಪ್ಪ (ಪಾರಾಣೆ), ಪಾಣತ್ತಲೆ ಹರೀಶ್, (ಮೂರ್ನಾಡು), ಕೊಡಪಾಲು ಗಣಪತಿ(ಚೇರಂಬಾಣೆ), ಕುದುಪಜೆ ಪಳಂಗಪ್ಪ(ಭಾಗಮAಡಲ), ಕಟ್ಟೆಮನೆ ಜನಾರ್ದನ (ಮರಗೋಡು), ತೂಟೇರ ವೆಂಕಟರಮಣ(ಮಕ್ಕAದೂರು), ಗುಡ್ಡೆಮನೆ ವಿಶುಕುಮಾರ್(ಗುಡ್ಡೆಹೊಸೂರು), ಗೌಡ ಮಹಿಳಾ ಒಕ್ಕೂಟದ ಅಮೆ ದಮಯಂತಿ, ಕೊಡಗು ಗೌಡ ವಿದ್ಯಾ ಸಂಘದ ಕಾರ್ಯದರ್ಶಿ ಪೇರಿಯನ ಉದಯ, ವಕೀಲರಾದ ಕೊಟ್ಟಕೇರಿಯನ ದಯಾನಂದ, ಕುಡೆಕಲ್ಲು ವಿದ್ಯಾಧರ, ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ, ನಿವೃತ್ತ ನೌಕರರ ಸಂಘದ ಕೋರನ ವಿಶ್ವನಾಥ, ಮಾಜಿ ಸೈನಿಕರ ಸಂಘದ ತುಂತಜೆ ದಯಾನಂದ, ಕುಶಾಲನಗರ ಗೌಡ ಯುವ ವೇದಿಕೆಯ ಕೊಡಗನ ಹರ್ಷ, ಹಿರಿಯರಾದ ದಂಬೆಕೋಡಿ ಆನಂದ,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಪಿ.ಎಂ.ಸAದೀಪ, ವಿನೋದ್ ಮೂಡಗದ್ದೆ, ಚಂದ್ರಶೇಖರ ಪೆರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ, ನಿಡ್ಯಮಲೆ ಡಾ.ಜ್ಞಾನೇಶ್, ಲೋಕೇಶ್ ಊರುಬೈಲು, ಕುದುಪಜೆ ಕೆ.ಪ್ರಕಾಶ, ಪೊನ್ನಚ್ಚನ ಮೋಹನ್, ಕೊಡಗು ಯುವ ವೇದಿಕೆಯ ಸದಸ್ಯರು ಮುಖಂಡರು ಇತರರು ಪುಷ್ಪ ನಮನ ಸಲ್ಲಿಸಿ, ಗೌರವಿಸಿದರು.
ಭಾರತ್ ಸೇವಾದಳದ ರೇವತಿ ರಮೇಶ್, ಕಡ್ಲೇರ ತುಳಸಿ ಮೋಹನ್ ಹಾಗೂ ಚೊಕ್ಕಾಡಿ ಪೇಮ ರಾಘವಯ್ಯ ಅವರು ಗುಡ್ಡೆಮನೆ ಅಪ್ಪಯ್ಯಗೌಡರ ಕುರಿತು ‘ನಮನ ಗೀತೆ’ ಹಾಗೂ ರಾಷ್ಟçಗೀತೆ ಹಾಡಿದರು. ಲಿಟ್ಲ್ ಪ್ಲವರ್ ಶಾಲೆಯ ಮುಖ್ಯಸ್ಥರಾದ ಸುನಿತಾ ಪ್ರೀತು ಮತ್ತು ವಿದ್ಯಾರ್ಥಿಗಳು ಆಶಯ ಗೀತೆ ಹಾಡಿದರು.

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top