ಕಾಸರಗೋಡಿನಿಂದ ಹೊರಟು ದೇಶ ವ್ಯಾಪಕ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಸುತ್ತಿ ದೇಶದ ಜನರ ಗಮನ ಸೆಳೆದ ಕಾಸರಗೋಡು ಕೂಡ್ಲುವಿನ ಇಬ್ಬರಲ್ಲಿ ಓರ್ವ ಕಾಲ್ನಡಿಗೆ ಯಾತ್ರೆಯ ಮಧ್ಯೆ ಮೃತಪಟ್ಟ ಘಟನೆ ವರದಿಯಾಗಿದೆ.
ಅಯೋಧ್ಯೆಯಿಂದ ಶ್ರೀ ಶಬರಿಮಲೆ ಗುರಿಯಾಗಿಸಿ ನಡೆಯುವ ಮಧ್ಯೆ ಭೋಪಾಲದಲ್ಲಿ ಹೃದಯಾಘಾತ ಸಂಭವಿಸಿ ಕೂಡ್ಲು ನಿವಾಸಿ ಶಿವಪ್ರಕಾಶ್ (45)ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯಿಂದ ಹೊರಟು ಮಧ್ಯಪ್ರದೇಶದ ಸಿಯೋನಿ ತಲುಪಿದಾಗ ಎದೆ ನೋವು ಕಾಣಿಸಿಕೊಂಡವರನ್ನು ಕೂಡಲೇ ಸಿಯೋನಿ ನಗರದ ಆಸ್ಪತ್ರೆಗೆ ಸ್ಥಳೀಯ ಹಿಂದೂ ದೇವಾಲಯಗಳ ಕಾರ್ಯಕರ್ತರ ಸಹಕಾರದಿಂದ ದಾಖಲಿಸಲಾಯಿತದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದರು.
ಕಳೆದ 24ವರ್ಷಗಳಿಂದ ನಿರಂತರ ಶಬರಿಮಲೆ ಸನ್ನಿಧಾನಕ್ಕೆ ವರ್ಷಂಪ್ರತಿ ವ್ರತ ನಿಷ್ಠೆಯಿಂದ ದರ್ಶನ ನೀಡುತ್ತಿದ್ದ ಇವರು ಇದೇ ಮೊದಲ ಬಾರಿಗೆ ದೇಶದ ಪುಣ್ಯ ಕ್ಷೇತ್ರಗಳ ದರ್ಶನಗೈದು ಶಬರಿಮಲೆಗೆ ಬರುವಂತೆ ದೇಶ ಪರ್ಯಟನೆ ಹೊರಟಿದ್ದರು.