ಬೆಳಕಿನ ಹಬ್ಬ ದೀಪಾವಳಿಯನ್ನು ಮೊದಲ ದಿನ ಸುಳ್ಯ ತಾಲೂಕಿನಲ್ಲಿ ಕತ್ತಲಲ್ಲಿ ಆಚರಿಸುವ ಭಾಗ್ಯವನ್ನು ಮೆಸ್ಕಾಂ ಕರುಣಿಸಿದೆ.
ಬುಧವಾರ ರಾತ್ರಿ ಹೋಗಿರುವ ವಿದ್ಯುತ್ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಪಾಪಸ್ ಬಂದಿದೆ.ಇದರಿಂದ ದೀಪಾವಳಿಗೆ ತಯಾರಿ ನಡೆಸುತ್ತಿದ್ದವರು ವಿದ್ಯುತ್ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.ಗುರುವಾರ ಸಂಜೆ 6 ಗಂಟೆಗೆ ಕೈ ಕೊಟ್ಟಿರುವ ವಿದ್ಯುತ್ ರಾತ್ರಿ 10 ಗಂಟೆಯ ತನಕ ಬಂದಿಲ್ಲ.ಬೇರೆ ತಾಲೂಕುಗಳಲ್ಲಿ ಬೆಳಕಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ ಸುಳ್ಯ ತಾಲೂಕಿನಲ್ಲಿ ಬರೇ ಕತ್ತಲ್ಲಿ ಜನರು ದೀಪಾವಳಿ ಆಚರಿಸಿಕೊಂಡಿದ್ದು ಮೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಧಿಕಾರಿಗಳಿಗೆ ಪೋನ್ ಮಾಡಿದರೆ ಅವರು ಪೋನ್ ರಿಸಿವ್ ಮಾಡುತ್ತಿಲ್ಲ.
ಕೈ ಕೊಟ್ಟ ವಿದ್ಯುತ್, ಬೆಳಕಿನ ಹಬ್ಬ ದೀಪಾವಳಿ ಕತ್ತಲಲ್ಲಿ ಆಚರಣೆ,ಮೆಸ್ಕಾಂ ಗೆ ಜನರಿಂದ ಹಿಡಿಶಾಪ
