ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ತಂಡವೊಂದು ನಯಾಜ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಹಲ್ಲೆಗೊಳಗಾದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸ್ಥಳೀಯ ನಿವಾಸಿ ರಜತ್ ಎಂಬಾತ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹಲ್ಲೆ ಮಾಡಿ , ಮಹಿಳೆಯರಿಗೆ ಮೆಸೇಜ್ ಮಾಡುವುದೇಕೆಂದು ತನ್ನನ್ನು ಪ್ರಶ್ನಿಸಿದ. ತಾನು ಮಹಿಳೆಯರಿಗೆ ಮೆಸೇಜ್ ಮಾಡಿಲ್ಲವೆಂದು ಹೇಳಿದರೂ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾಗಿಯೂ ನಯಾಜ್ ಆರೋಪಿಸಿದ್ದಾರೆ.
ಮಹಿಳೆಯರಿಗೆ ಮೆಸೆಜ್ ಮಾಡಿದ ಆರೋಪ : ಯುವಕನಿಗೆ ತಂಡದಿಂದ ಹಲ್ಲೆ
