ಅಜ್ಜಾವರ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಶಿವಾಜಿ ಶಾಖೆ ಅಜ್ಜಾವರ ಇದರ ನೇತೃತ್ವದಲ್ಲಿ ಶ್ರೀ ಶಾರದ ರಾಮ ಸೇವಾ ಪ್ರತಿಷ್ಠಾನ ಬಯಂಬು ಇಲ್ಲಿ ಬಾಲಸಂಸ್ಕಾರ ಕೇಂದ್ರ ಉದ್ಘಾಟನೆಗೊಂಡಿತು. ಅಜ್ಜಾವರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು ದೀಪ ಪ್ರಜ್ವಲಿಸುವ ಮೂಲಕ ಬಾಲ ಸಂಸ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ಅಟಲ್ ಜೀ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿಯಾದ ಸುಭೋದ್ ಶೆಟ್ಟಿ ಮೇನಾಲ ಇವರು ಬಾಲ ಸಂಸ್ಕಾರದ ಮಹತ್ವದ ಬಗ್ಗೆ ಬೌದ್ಧಿಕ ನಡೆಸಿದರು. ವಿಶ್ವ ಹಿಂದೂ ಪರಿಷತ್ತು ಭಜರಂಗದಳದ ಸುಳ್ಯ ಪ್ರಖಂಡ ದ ಅಧ್ಯಕ್ಷರಾದ ಸೋಮಶೇಖರ ಪೈಕ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಈ ಸಂದರ್ಭದಲ್ಲಿ ಪ್ರಖಂಡದ ಗೋ ರಕ್ಷಾ ಪ್ರಮುಖರಾದ ಮಂಜುನಾಥ್ ಕಾಟೂರು, ಶಿವಾಜಿ ಶಾಖೆಯ ಅಧ್ಯಕ್ಷರಾದ ನಾರಾಯಣ ಬಂಟರಬೈಲು, ಮಾತೃ ಶಕ್ತಿ ಪ್ರಮುಖರಾದ ವಿಶಾಲ ಸೀತಾರಾಮ್ ಕರ್ಲಪ್ಪಾಡಿ, ಶ್ರೀಮತಿ ಮಮತಾ ಪೃಥ್ವಿರಾಜ್ ಮೇನಾಲ, ದುರ್ಗಾವಾಹಿನಿ ಪ್ರಮುಖರಾದ ಶ್ರೀಮತಿ ರಮ್ಯ ಭವಾನಿ ಶಂಕರ, ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ವಿಶ್ವ ಹಿಂದೂ ಪರಿಷತ್‌ ಪರಿಷತ್ತು ಮಾತೃ ಶಕ್ತಿ ದುರ್ಗಾವಾಹಿನಿ ಜವಾಬ್ದಾರಿಯುತ ಮಾತೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಗುರುಗಳಾದ ಆನಂದ ಪುಟಾಣಿಗ ಕುಣಿತ ಭಜನೆ ತರಬೇತಿ ನೀಡಿದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top