ಸುಳ್ಯ ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಚೇಯರ್ ಗಳು ನಾದುರಸ್ತಿಯಲ್ಲಿದ್ದು ಮಂಗಳವಾರ ಮಹಿಳೆಯೊಬ್ಬರು ಕುಳಿತುಕೊಳ್ಳುವ ಸಂದರ್ಭದಲ್ಲಿ ಚೇಯರ್ ಮುರಿದು ಮಹಿಳೆ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ವರದಿಯಾಗಿದೆ.
ಮಹಿಳೆಯ ಕೈ ಕಾಲುಗಳಿಗೆ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಚೇಯರ್ ಗಳು ಕಟ್ ಆಗಿ ನಿಂತಿವೆ. ಈ ಸಮಸ್ಯೆಯ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಕಟವಾಗಿತ್ರು ಆದರೂ ಈ ಸಮಸ್ಯೆ ಪರಿಹಾರವಾಗಿಲ್ಲ. ಕಳಪೆ ಗುಣಮಟ್ಟದ ಕಬ್ಬಿಣದ ಚೇಯರ್ ಅಳವಡಿಸಿರುವುದೇ ಇಂತಹ ಘಟನೆಗಳು ಆಗಾಗ ನಡೆಯಲು ಕಾರಣವಾಗಿದೆ.ಕೆ.ಎಸ್.ಆರ್.ಟಿ.ಸಿಯವರು ಪ್ರಯಾಣಿಕರ ಸೊಂಟ ಮುರಿದುಕೊಳ್ಳುವ ಮೊದಲು ಎಚ್ಚೆತ್ತುಕೊಂಡು ಚೇಯರ್ ಬದಲಾಯಿಸಿ ಗುಣಮಟ್ಟದ ಚೇಯರ್ ಅಳವಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.