ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಅವ್ಯವಸ್ಥೆಯ ಬಗ್ಗೆ ಮಾರ್ದನಿ ನ್ಯೂಸ್ ನಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಬುಧವಾರ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ಬಸ್ಸು ನಿಲ್ದಾಣಕ್ಕೆ ದಿಡೀರ್ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಒಂದು ವಾರದಲ್ಲಿ ಸಮಸ್ಯೆ ಪರಿಹಾರವಾಗದಲ್ಲಿ ನಾನೇ ಬಸ್ಸು ನಿಲ್ದಾಣದಲ್ಲಿ ಕಳಿತುಕೊಂಡು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಮಂಗಳವಾರ ಬಸ್ಸು ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮುರಿದ ಚೇಯರ್ ನಿಂದ ಬಿದ್ದು ಗಾಯಗೊಂಡಿದ್ದರು. ಈ ವರದಿ ಮಾರ್ದನಿ ನ್ಯೂಸ್ ನಲ್ಲಿ ವಿಡಿಯೋ ಸಮೇತ ಪ್ರಕಟವಾಗಿತ್ತು.
ಮುರಿದುಕೊಂಡಿರುವ ಚೇಯರನ್ನು ತಕ್ಷಣ ದುರಸ್ತಿ ಪಡಿಸಬೇಕು. ಸುಳ್ಯದಿಂದ ವಿವಿದ ಕಡೆಗಳಿಗೆ ತೆರಳುವ ಬಸ್ಸುಗಳು ಸರಿಯಾದ ಸಮಯದಲ್ಲಿ ಸಂಚರಿಸದೆ ಇರುವ ಬಗ್ಗೆ ಪದೆ ಪದೆ ದೂರುಗಳು ಬರುತ್ತಿವೆ. ಸರಿಯಾದ ಸಮಯಕ್ಕೆ ಬಸ್ಸು ಕಲ್ಪಿಸಿ ಸಾರ್ವಜನಿಕರಿಗೆ ಬಸ್ಸು ಲಭ್ಯವಾಗುವಂತೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಮರ್ಕಂಜಕ್ಕೆ ಬಸ್ಸಿನ ಟ್ರಿಪ್ ಕಟ್ ಮಾಡಿದ ಹಿನ್ನಲೆಯಲ್ಲಿ ತಕ್ಷಣ ಸ್ಥಳದಲ್ಲಿಯೇ ಬಸ್ಸಿನ ವ್ಯವಸ್ಥೆ ಮಾಡಿದರು.ಸ್ಥಳದಲ್ಲಿ ಹಲವಾರು ವಿದ್ಯಾರ್ಥಿಗಳು, ಮಹಿಳೆಯರು, ಶಾಸಕರ ಜೊತೆ ಸಮಸ್ಯೆಯನ್ನು ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರವಾಗಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎನ್ ಎ, ರಾಮಚಂದ್ರ ಎಸ್.ಎನ್ ಮನ್ಮಥ ,ಪ್ರಸಾದ್ ಕಾಟೂರು ಇತರರು ಉಪಸ್ಥಿತರಿದ್ದರು.
ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಅವ್ಯವಸ್ಥೆ,ಮಾರ್ದನಿಯಲ್ಲಿ ವರದಿ ಪ್ರಕಟ ಹಿನ್ನಲೆ ದಿಡೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಶಾಸಕಿ ಭಾಗೀರಥಿ ಮುರಳ್ಯ,ಒಂದು ವಾರದಲ್ಲಿ ಸಮಸ್ಯೆ ಪರಿಹಾರವಾಗದಿದಲ್ಲಿ ಪ್ರತಿಭಟನೆ
