(ಕವನ) ಪ್ರೀತಿಯ ಪುತ್ರ

ಅನುದಿನವೂ ನಾನು ನಿನಗೆ
ವಿಶೇಷವಾಗಿ ಪ್ರಾರ್ಥಿಸುವೆನು
ನನ್ನ ಭರವಸೆಯನ್ನು ಪುನರುಜ್ಜೀವನಗೊಳಿಸಿದ
ನನ್ನ ಪ್ರೀತಿಯ ಮಗ ನೀನು.

Ad Widget . Ad Widget . Ad Widget . . Ad Widget . . Ad Widget .

ನಿನ್ನ ಕಣ್ಣುಗಳಲ್ಲಿನ ಒಂದು
ನೋಟವು ನನ್ನ ಆಲೋಚನೆಯ
ಅನುಭವದ ಕನ್ನಡಿ ,

. Ad Widget . Ad Widget . Ad Widget

ಮಾತೃತ್ವವು ನಿನ್ನಿಂದ
ನನಗೊದಗಿದ ಪೂರ್ವ
ಜನುಮದ ಪುಣ್ಯವು
ಸಹಿಸುವೆನು ನಿನಗಾಗಿ
ಬದುಕಿನ ಎಲ್ಲ ಏಳು ಬೀಳನು

ಪ್ರತಿ ದಿನವೂ ನನಗೆ ನಿನ್ನ ಜನ್ಮದಿನ…
ನಾನು ನಿನ್ನನ್ನು ಹೆತ್ತ ಪ್ರತಿ ಕ್ಷಣಕ್ಕೂ!
ಯಾವುದೇ ಮಿತಿಯಿಲ್ಲದ ಸಂತೋಷದ
ಅನುಭವ ನೀಡಿದವನು ನನ್ನ ಮಗನು .

ಆ ವಿಶೇಷ ಪ್ರೀತಿ ನನ್ನ
ಹೃದಯಕ್ಕೆ ಮಾತ್ರ ತಿಳಿದಿದೆ
ವಿಶೇಷವು ನನ್ನ ಮಗನ ಪ್ರೀತಿಯು
ಅದು ನನ್ನ ಹೃದಯಕ್ಕೆ ಮಾತ್ರ ತಿಳಿದಿದೆ.

✍️ ಪ್ರಿಯಾ ಸುಳ್ಯ ಕವಯಿತ್ರಿ
ದಕ್ಷಿಣ ಕನ್ನಡ ಜಿಲ್ಲೆ

Leave a Comment

Your email address will not be published. Required fields are marked *

error: Content is protected !!
Scroll to Top