ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡು ಒಬ್ಬರು ಮೃತಪಟ್ಟಿದ್ದು ಮೃತಪಟ್ಟ ಯುವತಿ ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ನಾರಾಯಣ ಗೌಡ ಎಂಬವರ ಮಕ್ಕಳಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರೆದರು. ಅನನ್ಯರಿಗೆ ಗಂಭೀರ ಗಾಯವಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಬರಡ್ಕದಲ್ಲಿ ಬಸ್ ಸ್ಕೂಟಿ ಅಪಘಾತದಲ್ಲಿ ಮೃತಪಟ್ಟ ಯುವತಿ ರಚನಾ, ಪುತ್ತೂರು ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ
