ಅಕ್ಕ ಪಕ್ಕದ ಮನೆಯವರು ಇಬ್ಬರು ಹೊಡೆದಾಡಿಕೊಂಡು ಓರ್ವ ಕೊಲೆಯಯಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟುವಿನಲ್ಲಿ ನಡೆದಿದೆ.
ಗೋಳಿತ್ತೊಟ್ಟುವಿನ ಅಲಾಂತಾಯ ನಿವಾಸಿ ವೆಂಕಪ್ಪ ಗೌಡರ ಪುತ್ರ ರಮೇಶ್ ಕೊಲೆಯಾದವರು. ಅವರ ನೆರೆಮನೆಯವರಾದ ಹರೀಶ್ ಕೊಲೆ ಮಾಡಿದ ಆರೋಪಿ.
ಇನ್ನು ಕೊಲೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ಆರೋಪಿಯ ಬಂಧನಕ್ಕೆ ತಯಾರಿ ನಡೆಸತ್ತಿದ್ದಾರೆ.