ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ್ ರವರಿಗೆ ಸಾರ್ವಜನಿಕ ಸನ್ಮಾಕ್ಕೆ ನಿರ್ಧಾರ

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸಂಘಟಕ ಗೋಕುಲದಾಸ್ ರವರಿಗೆ ಸಾರ್ವಜನಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಗೋಕುಲದಾಸ್ ಅಭಿಮಾನಿಗಳ ಸಭೆ ನ.12 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಿತು.
ಎನ್.ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ.ಜಯರಾಮ್, ದಿನೇಶ್ ಮಡಪ್ಪಾಡಿ, ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ್, ಕೆ.ಎಂ.ಮುಸ್ತಫಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವಾನಿಶಂಕರ ಕಲ್ಮಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು
ಸಭೆಯಲ್ಲಿ ಮಾತನಾಡಿದ ಪ್ರಮುಖರು ಗೋಕುಲದಾಸ್‌ ಅವರಿಗೆ ಅರ್ಹವಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ಅವರಿಗೆ ಸಾರ್ವಜನಿಕ ಸನ್ಮಾನ ಮಾಡಬೇಕಾಗಿರುವುದು ನಮ್ಮಲ್ಲರ ಕರ್ತವ್ಯ. ಆದರೆ ಸನ್ಮಾನವನ್ನು ಅತ್ಯಂತ ಅರ್ಥಪೂರ್ಣವಾಗಿ ಮಾಡಬೇಕಾಗಿರುವುದರಿಂದ ಮುಂದೆ ಪೂರ್ಣ ಪ್ರಮಾಣದ ಸಭೆಯನ್ನು ಕರೆದು ಸಮಿತಿ ರಚಿಸಿ ಸನ್ಮಾನ ಕಾರ್ಯಕ್ರಮದ ರೂಪುರೇಷೆ ಮಾಡಲು ನಿರ್ಧಾರಕ್ಕೆ ಬರಲಾಯಿತು. ಶಾರದಾಂಬ ಸೇವಾ ಸಮಿತಿಯಲ್ಲಿಯೇ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದರಿಂದ ಅವರ ನೇತೃತ್ವದಲ್ಲಿಯೇ ನಮ್ಮೆಲ್ಲರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅದ್ದೂರಿ ಸನ್ಮಾನ ಮಾಡಲು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು .
ಸಭೆಯಲ್ಲಿ ತೀರ್ಥರಾಮ ಜಾಲ್ಲೂರು, ರಾಮಚಂದ್ರ ಪೆಲ್ಲಡ್ಕ,ಚಂದ್ರಶೇಖರ ನಂಜೆ, ಅಶೋಕ್ ಪೀಚೆ,ಸತ್ಯಕುಮಾರ್ ಆಡಿಂಜ, ಮನಮೋಹನ ಪುತ್ತಿಲ, ಡೇವಿಡ್ ದೀರಾ ಕ್ರಾಸ್ತಾ,ಸತೀಶ್ ಕೆ.ಎಲ್., ಜಬ್ಬಾರ್ ಲ್ಯಾಂಡ್ ಲಿಂಕ್ಸ್, ಪದ್ಮನಾಭ ಹರ್ಲಡ್ಕ, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್,ಭಾಸ್ಕರ ಪೂಜಾರಿ, ಯೂಸುಫ್ ಅಂಜಿಕ್ಕಾರ್,ಹರಿಶ್ಚಂದ್ರ ಪಂಡಿತ್, ಚೇತನ್ ಕಜೆಗದ್ದೆ,ಚಂದ್ರಶೇಖರ ಪಂಡಿತ್, ಶುಭಕರ ನಾಯಕ್‌, ತಾಜು ಅರಂತೋಡು,ನಮಿತ ಹರ್ಲಡ್ಕ, ಮೊದಲಾದವರು ಉಪಸ್ಥಿತರಿದ್ದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top