ಜಾಲ್ಸೂರು : ಕಡಿಮೆ ರಕ್ತದ ಒತ್ತಡದಿಂದ ಅಸೌಖ್ಯಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಾಲ್ಕೂರು ಗ್ರಾಮದ ಬೇರ್ಪಡ್ಕದಲ್ಲಿ ನ.13ರಂದು ವರದಿಯಾಗಿದೆ.
ಬೇರ್ಪಡ್ಕದ ಬಾಲಕೃಷ್ಣ ನಾಯ್ಕ ಅವರ ಪತ್ನಿ ಗೀತ ಅವರು ಮೃತಪಟ್ಟ ಮಹಿಳೆ.ಅವರು ಸಮೀಪದ ಮನೆಯೊಂದಕ್ಕೆ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ದಿಢೀರನೆ ಅಸೌಖ್ಯಕ್ಕೊಳಗಾಗಿ, ತಮ್ಮ ಮನೆಗೆ ಮಧ್ಯಾಹ್ನ ಬಂದಿದ್ದರು. ಆದರೆ ಮನೆಯಲ್ಲಿ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಲೋ ಬಿಪಿಯಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.