ಲಂಡನ್: 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್ ಮಹಾಮಾರಿ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಆಸ್ಟಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳ ಅಡ್ಡಪರಿ ಣಾಮದ ಕುರಿತು ನಾನಾ ವದಂತಿಗಳು ಇದ್ದ ವಾದರೂ, ಈ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದೆ.
ಇದೇ ಆಸ್ಟಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿ ಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡಾ ಇದೇ ಆಗಿದೆ.
ನಾವು ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣ ಗಳಲ್ಲಿ ಅಡ್ಡಪರಿಣಾಮ ಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಪ್ರೊಂಬೋಸಿಸ್ ಎಂಬ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಿದೆ.