ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್‌ಗಳಲ್ಲಿ ನಗದು ರಹಿತ ಪಾವತಿ ಆಯ್ಕೆಗಳನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಇಡೀ ಕೆಎಸ್‌ಆರ್‌ಟಿಸಿ ನೆಟ್‌ವರ್ಕ್‌ನಲ್ಲಿ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದೆ.
ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಸ್ ಇರಲಿ, ಕೆಎಸ್‌ಆರ್‌ಟಿಸಿ ಬಸ್ ಇರಲಿ ಮೊದಲ ಸಮಸ್ಯೆ ಎಂದರೆ ಚಿಲ್ಲರೆ ಸಮಸ್ಯೆ ಕಾಡುತ್ತದೆ. ಇದೇ ವಿಷಯಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಲೆಕ್ಕವಿಲ್ಲದಷ್ಟು ಜಗಳ ನಡೆದು ಹೋಗಿದೆ. ಒಮ್ಮೊಮ್ಮೆ ಬಸ್ ನಿಲ್ಲಿಸಿ ಜಗಳ ಅತಿರೇಕಕ್ಕೆ ಹೋಗಿದ್ದೂ ಉಂಟು. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಾರಿಗೆ ಇಲಾಖೆ ಯುಪಿಐ ಬಳಸಲು ಮುಂದಾಗಿದೆ. ಯುಪಿಐ ಹೊಸದೇನೂ ಅಲ್ಲ. ಎಲ್ಲರಿಗೂ ಇದರ ಬಳಕೆ ತಿಳಿದೇ ಇದೆ.ಯುಪಿಐ ಮೂಲಕ ಟಿಕೆಟ್ ಖರೀದಿ ಮಾಡಲು ಅವಕಾಶ
ನೀಡಬೇಕೆನ್ನುವುದು ಸಾರ್ವಜನಿಕರು ಮತ್ತು
ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿತ್ತು. ಚಿಲ್ಲರೆ
ಸಮಸ್ಯೆ ಜತೆಗೆ ಪ್ರಯಾಣಿಕರು ಟಿಕೆಟ್ ಖರೀದಿ ಮಾಡಲು
ಕಡ್ಡಾಯವಾಗಿ ಜತೆಯಲ್ಲಿ ನಗದು ಹಣವನ್ನು ಇಟ್ಟು
ಕೊಳ್ಳಲೇಬೇಕಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಯುಪಿಐ
ಜಾರಿಗಳಿಸಲಾಗಿದೆ. ಇದಕ್ಕಾಗಿ ಸರ್ಕಾರ 10 ಸಾವಿರ
ಸುಧಾರಿತ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್
(ಇಟಿಎಂ)ಗಳನ್ನು ಖರೀದಿಸಿದೆ
ಈ ಮೆಷಿನ್‌ಗಳ ಮೂಲಕ ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಪ್ರಯಾಣಿಕರಿಗೆ ಎಲ್ಲ ರೀತಿಯ ಆಯ್ಕೆಗಳಿರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಕಿರಿ ಕಿರಿಯೂ ಇರುವುದಿಲ್ಲ. ಕೆಎಸ್‌ಆ ಟಿಸಿ 8,800 ಬಸ್‌ಗಳನ್ನು ಓಡಿಸುತ್ತಿದ್ದು, ಇನ್ನೂ ಎರಡು ಮೂರು ಸಾವಿರ ಬಸ್‌ಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಾಗಿ, ಹೆಚ್ಚು ಎಟಿಎಂಗಳನ್ನು
ಖರಿದಿಸಿದೆ.ಹಂತ ಹಂತವಾಗಿ ಇದು ಜಾರಿಗೆ ಬರಲಿದೆ.