ನ.23ಕ್ಕೆ ಅರಂತೋಡಿನಲ್ಲಿ 27 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 23.11.2024ರ ಶನಿವಾರದಂದು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.
ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ.
9:30ಕ್ಕೆ ರಾಷ್ಟ್ರಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂಪಿ ಶ್ರೀನಾಥ್ ನೆರವೇರಿಸಲಿದ್ದಾರೆ. 9:45 ಕ್ಕೆ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ಮಾನ್ಯ ತಹಸಿಲ್ದಾರ್ ಶ್ರೀಮತಿ. ಮಂಜುಳಾ ಇವರು ನೆರವೇರಿಸಲಿದ್ದಾರೆ.
ಪೂರ್ವಾಹ್ನ ಗಂಟೆ 10 ರಿಂದ ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿಗಳದ ಶ್ರೀ. ನರೇಂದ್ರ ರೈ ದೇರ್ಲ ನೆರವೇರಿಸಲಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರತಥಿ ಮುರುಳ್ಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಮಾವಾಜಿ ಹೊಸ ಕೃತಿಗಳ ಬಿಡುಗಡೆ ಗೊಳಿಸಲಿದ್ದಾರೆ. ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಕೆ ಆರ್ ಗಂಗಾಧರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ್ ಪೇರಾಲ್ ಉಪಸ್ಥಿತರಿರುತ್ತಾರೆ.
27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಪ್ರಭಾಕರ್ ಶಿಶಿಲರ ಕುಂತಿ ಕಾದಂಬರಿ, ಕಲ್ಲುರ್ಟಿಯ ಕುಕ್ಕುಟ ಕಥನಗಳು ಎಂಬ ಕಥಾಸಂಕಲನ, ಶ್ರೀಮತಿ ಲೀಲಾ ದಾಮೋದರ ಅವರ ನದಿಯ ನಾದ ಕವನ ಸಂಕಲನ ಸಂಗೀತ ರವಿರಾಜ್ ಚೆಂಬು ಇವರ ಪಯಶ್ವಿನಿಯ ತೀರದಲ್ಲಿ ಲಲಿತ ಪ್ರಬಂಧ ಮತ್ತು ಅಕ್ಕರೆಯ ಕಡೆಗೋಲು ಎಂಬ ವಿಮರ್ಶ ನಾಟಕ
ಶ್ರೀ ಪ್ರಕಾಶ್ ಮೂಡಿತ್ತಾಯ ಇವರ ಲಸಿಕೆಯ ಕಥೆ ಮತ್ತು ಮೌಡ್ಯವೇಕೆ ಇನ್ನೂ ಎಂಬ ವಿಜ್ಞಾನ ನಾಟಕ,
ನಿರೀಕ್ಷಾ ಸುಲಾಯ ಅವರ ನನ್ನ ಮನಸ್ಸು ನನ್ನ ಕನಸು ಎಂಬ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 12 ರಿಂದ 15 ಸಾಹಿತಿ ಶ್ರೀಮತಿ ವಿಮಲಾರುಣ ಪಡ್ಡಂಬೈಲು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಲೀಲಾಕುಮಾರಿ ತೊಡಿಕಾನ, ಹೆಚ್. ಭೀಮರಾವ್ ವಾಷ್ಟರ್, ಹೇಮಲತಾ ಕಜೆಗದ್ದೆ, ಶಿವಾದೇವಿ ಅವನಿಶ್ಚಂದ್ರ, ತೀರ್ಥರಾಮ ಹೊದ್ದೆಟ್ಟಿ, ವಿಜಯ್ ಕುಮಾರ್ ಕಾಣಿಚ್ಚಾರ್, ಮಮತಾ ರವೀಶ್ ಪಡ್ಡಂಬೈಲು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:30 ರಿಂದ 2 ಗಂಟೆಯ ತನಕ ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮದ್ಯಾಹ್ನ 2.00 ರಿಂದ 3.00 ಗಂಟೆಯವರೆಗೆ ಸಾಹಿತಿ ಶ್ರೀಮತಿ ನಂದಕುಮಾರ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ನಿರಂಜನ ಶತಮಾನೋತ್ಸವ ಸ್ಮರಣೆ ವಿಚಾರಗೋಷ್ಠಿ ನಡೆಯಲಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆ ಇಲ್ಲಿಯ ಸಹಪ್ರಾಧ್ಯಾಪಕರಾದ ಶ್ರೀ ರಾಜಶೇಖರ ಹಳೆಮನೆ ಇವರು ನಿರಂಜನ ಬದುಕು ಬರಹ ಅವಲೋಕನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 3 ರಿಂದ 4ರವರೆಗೆ ಶ್ರೀ ದುರ್ಗಾ ಕುಮಾರ್ ನಾಯರ್ ಕೆರೆ ಮುಖ್ಯಸ್ಥರು ಸುದ್ದಿ ಚಾನೆಲ್ ಇವರ ಪರಿಸಮಾಪ್ತಿಯಲ್ಲಿ ಕನ್ನಡ ಭಾಷೆ ಅನ್ನದ ಭಾಷೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ಚರ್ಚೆ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅನುಷಾ ಕೆ., ಪೌರ್ಣಮಿ ಕೆ, ಸರಕಾರಿ ಪ್ರೌಢಶಾಲೆ ಮರ್ಕಂಜದ ಭೂಷಣ್ ಕೆಪಿ, ರೋಟರಿ ಪ್ರೌಢಶಾಲೆಯ ಶ್ರೀ ದುರ್ಗಾ ಯು, ಬೆಸ್ಟ್ ಕುರಿಯ ಕೋಸ್ ಪ್ರೌಢಶಾಲೆ ಗುತ್ತಿಗಾರಿನ ಜಾಕ್ಸನ್, ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡಿನ ಸೋಹನ್ ಪಿ. ಜೆ., ಕೆಪಿಎಸ್ ಬೆಳ್ಳಾರೆಯ ಅಂಜನಾ ವಿ ಭಾಗವಹಿಸಲಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ. ಪ್ರಕಾಶ್ ಮೂಡಿತ್ತಾಯ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.
ಗಾಯಕರಾದ ಶ್ರೀ. ಕೆ.ಆರ್. ಗೋಪಾಲ ಕೃಷ್ಣ ಹಾಗೂ ಶ್ರೀಮತಿ ಪೂರ್ಣಿಮಾ ಇವರಿಂದ ಗೀತ ಗಾಯನ ಕೂಡ ನಡಿಲಿಕ್ಕಿದೆ.
ಸಂಜೆ 4ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಭಾಷಣವನ್ನು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಧನಂಜಯ ಕುಂಬ್ಲೆ ನೆರವೇರಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿಜಿಸ್ಟರ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ಸಾಧಕನನ್ನು ಸನ್ಮಾನಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಡಾ. ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಹರಪ್ರಸಾದ್ ತುದಿಯಡ್ಕ, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್ ಗೌಡ ಉಪಸ್ಥಿತರಿರುತ್ತಾರೆ.
ಡಾ. ಶ್ವೇತಾ ಮಡಪ್ಪಾಡಿ ಇವರಿಗೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ, ಹುಕ್ರಪ್ಪ ಉಳುವಾರು ಇವರಿಗೆ ರಕ್ಷಣಾ ಸೇವೆ, ಕುಮಾರಸ್ವಾಮಿ ತೆಕ್ಕುಂಜೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಸರಸ್ವತಿ ಚಿದಾನಂದ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ, ಗಣೇಶ್ ಭಟ್ ಇವರಿಗೆ ಹಿರಿಯ ಲೆಕ್ಕ ಪರಿಶೋಧಕರು, ಕೆ ಆರ್ ಪದ್ಮನಾಭ ಇವರಿಗೆ ಸಹಕಾರ/ ಸಮಾಜ ಸೇವೆ, ಡಾ. ಲೀಲಾದರು ಡಿ ವಿ ಇವರಿಗೆ ಆಡಳಿತ / ವೈದ್ಯಕೀಯ ತೇಜೇಶ್ವರ ಕುಂದಲ್ಪಾಡಿ ಇವರಿಗೆ ಪತ್ರಿಕೋದ್ಯಮ, ಆನಂದ ಕಲ್ಲಗದ್ದೆ ಇವರಿಗೆ ಮಾಹಿತಿ ಮತ್ತು ತಂತ್ರಜ್ಞಾನ, ಸಲಿಂ ಸುಳ್ಯ ಇವರಿಗೆ ಸಮಾಜ ಸೇವೆ / ಉದ್ಯಮ ಕ್ಷೇತ್ರದಲ್ಲಿ, ಕೇಶವ ಪರವ ಇವರಿಗೆ ಭೂತಾರಾಧನೆ ಕ್ಷೇತ್ರದ ಸಾಧನೆಗಾಗಿ ಕನ್ನಡ ಕಸ್ತೂರಿ ಸನ್ಮಾನವನ್ನು ಪ್ರಧಾನ ಮಾಡಲಿದ್ದೇವೆ.
ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವಗಾನ ಕನ್ನಡ ಗೀತೆಗಳ ಗಾಯನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ ಬೈಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಅರೆಭಾಷೆ ಸಿರಿ ಸಂಸ್ಕೃತಿ -ನೃತ್ಯ ರೂಪಕ ನಡೆಯಲಿದೆ. ಈ ಸಮ್ಮೇಳನದ ಯಶಸ್ವಿಗಾಗಿ ಸಮಿತಿ ಗಳನ್ನು ಉಪ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ವಿನಂತಿಸಿಕೊಂಡಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top