ಇಂದು ಸಂಜೆ ಕಲ್ಲುಗುಂಡಿ ಸಮೀಪ ವಾಹನ ಅಪಘಾತವಾಗಿದ್ದು ಅದರಲ್ಲಿ ಓರ್ವ ಗಾಯಾಳುವನ್ನು ಆಂಬುಲೆನ್ಸ್ ನಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಇರುವ ಜಾಗದಲ್ಲಿ ವೈದ್ಯರೊಬ್ಬರ ಕಾರು ನಿಲ್ಲಿಸಿದ್ದು ಗಾಯಳುವನ್ನು ಇಳಿಸಲು ಜಾಗವಿಲ್ಲದ ಪರಿಸ್ಥಿತಿ ಉಂಟಾಯಿತು.
ಈ ವೇಳೆ ಕಾರನ್ನು ತೆಗೆಯಲು ಆಂಬುಲೆನ್ಸ್ ಚಾಲಕ ಹೇಳಿದರೂ ಕಾರು ತೆಗೆಯದೆ ವೈದ್ಯರು ಸಿಟ್ಟುಗೊಂಡರು.
ಬಳಿಕ ಆಂಬುಲೆನ್ಸ್ ಚಾಲಕ ಮತ್ತು ವೈದ್ಯರ ನಡುವೆ ಅಲ್ಪ ಸ್ವಲ್ಪ ಮಾತಿಗೆ ಮಾತು ಬೆಳೆಯಿತು. ಬಳಿಕ ಕಾರಿನಳಿನಲ್ಲಿದ್ದ ಗಾಯಳುವನ್ನು ಹೊರಗೆ ಇಳಿಸಿ ಮತ್ತೆ ಟ್ರಾಲಿಯಲ್ಲಿ ಅವರನ್ನು ಆಸ್ಪತ್ರೆ ಒಳಗೆ ಕೊಂಡೊಯ್ಯುವ ಪರಿಸ್ಥಿತಿ ಉಂಟಾಯಿತು
ಈ ಘಟನೆ ಬಗ್ಗೆ ಆಂಬುಲೆನ್ಸ್ ಚಾಲಕ ಮಾಲಕ ಸಂಘಟನೆಯ ಸದಸ್ಯರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಗಾಗ ಇಂತಹ ಸಮಸ್ಯೆ ನಡೆಯುತ್ತಿರುತ್ತವೆ ಇದಕ್ಕೆ ಬ್ರೇಕ್ ಹಾಕುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.