ದ ಕ ಸಂಪಾಜೆ ಪ್ರಾಥಮಿ ಕ್ರಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗಿದೆ.ಮುಂದಿನ ಡಿ.23ಕ್ಕೆ
ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಲಿದೆ.ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲಾಯಿತು. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಹಕಾರಿ ಅಭಿವೃದ್ಧಿ ರಂಗ’ದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞ ಗೂನಡ್ಕ ಯಮುನಾ ಬಿ ಎಸ್, ಉಷಾ ರಾಮ್ ನಾಯ್ ಸುಶೀಲ ಬಾಲಕೃಷ್ಣ ಪ್ರಮೀಳಾ ಪೆಲ್ತಾಡ್ಕ, ಜಗದೀಶ್ ರೈ ಸಂಜೀವ ಪೂಜಾರಿ, ಸಿಲ್ವಸ್ಟರ್ ಡಿಸೋಜಾ, ಜ್ಞಾನಶೀಲನ್ ರಾಜು, ಅಬೂಸಾಲಿ ಪಿ ಕೆ, ಕೆ.ಪಿ ಜಾನಿ ಇವರನ್ನು ಸರ್ವನುಮತದಿಂದ ಅಯ್ಕೆ ಮಾಡಲಾಯಿತು ಎಂದು ತಿಳಿದು ಬಂದಿದೆ.