ಕೋಳಿ ಮೊದಲಾ? ಮೊಟ್ಟೆ ಮೊದಲಾ?’ ಎಲ್ಲರನ್ನು ಬಹು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಯಾಗಿದೆ.ಈ ಪ್ರಶ್ನೆಗೆ ವಿಜ್ಞಾನಿಗಳು ಕೊನೆಗೂ ಒಂದು ಉತ್ತರ ನೀಡಿದ್ದಾರೆ. ಜಿನೆವಾ ವಿಶ್ವವಿದ್ಯಾಲಯದ ವಿಜ್ಞಾ ನಿಗಳು ಹಲವು ವರ್ಷಗಳ ಸಂಶೋಧನೆ ನಡೆಸಿದ್ದು, ಮೊಟ್ಟೆಯೇ ಮೊದಲು ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಏಕ ಕೋಶದ ಬೆಳವಣಿಗೆಯನ್ನು ಅಧ್ಯಯನ ಮಾಡುವ ‘ಕ್ರೋಮೋಸ್ಪಿ ಯರಾ ಪೆರ್ಸಿಂಕಿ’ ವಿಧಾನದ ಮೂಲಕ ವಿಜ್ಞಾನಿಗಳು ಇದನ್ನು ಸಾಬೀತು ಪಡಿಸಿದ್ದಾರೆ. ಜೀವಸೃಷ್ಟಿಯಲ್ಲಿ ಮೊದಲಿಗೆ ಒಂದು ಜೀವಕೋಶ ಉತ್ಪತ್ತಿಯಾಗುತ್ತದೆ. ಬಳಿಕ ಅದು ನಿಧಾನವಾಗಿ ಅಂದರೆ ಸಾವಿರಾರು ವರ್ಷಗಳವರೆಗೆ ನಿರಂತರವಾಗಿ ಅಭಿವೃದ್ಧಿ ಸಾಧಿಸುತ್ತಾ ಹೋಗು ತ್ತದೆ. ಹೀಗಾಗಿ ಯಾವುದೇ ಜೀವಿಯ ಹುಟ್ಟಿನಲ್ಲಿ ಅದರ ಭ್ರೂಣ ಮೊದಲು
ಮೊಟ್ಟೆಯೇ ಮೊದಲು ಎಂದು ಜೀವಶಾಸ್ತ್ರ ವಿಜ್ಞಾನಿಗಳು
ಹೇಳಿದ್ದಾರೆ.
ಈ ಸಂಶೋಧನೆಯನ್ನು ಆಧಾರವಾ ಗಿಟ್ಟುಕೊಂಡು ನೋಡುವುದಾದರೆ, ಒಂದು ಜೀವಕೋಶದಿಂದ ಸೃಷ್ಟಿಯಾಗುವ ಮೊಟ್ಟೆಯೇ ಮೊದಲು ಸೃಷ್ಟಿಯಾ ಗಿರಬೇಕು. ಕಾಲಾನುಸಾರ ಅದರಿಂದ ಹುಟ್ಟುವ ಮರಿ ಕೋಳಿಯ ರೂಪ (ಪಕ್ಷಿಯ ರೂಪ) ಪಡೆದುಕೊಂಡಿರ ಬೇಕು ಎಂದು ಅವರು ಹೇಳಿದ್ದಾರೆ
.