ಮನೆಯಿಂದ ನಗ ನಗದು ಕಳವು

ಮನೆಯಿಂದ ಕಳ್ಳರು ಅಪಾರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿಟ್ಲ ಸಮೀಪದ ಕುಡ್ತಮುಗೇರ್ ಸಮೀಪ ಮಂಕುಡೆ ಎಂಬಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಅಳಕೆಮಜಲಿನಲ್ಲಿ 2 ಮನೆಗಳಿಂದ ಇದೇ ಮಾದರಿಯಲ್ಲಿ ಕಳ್ಳತನ ನಡೆದಿತ್ತು.
ಮನೆಯ ಯಜಮಾನ ಗಣೇಶ್ ರೈ ಕೆಲಸಕ್ಕೆ ಹೋಗಿದ್ದು, ಮನೆಯ ಯಜಮಾನಿ ವಿಟ್ಲ ಸಂತೆಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಯಿಂದ ಒಂದೂವರೆ ಗಂಟೆಯ ಒಳಗೆ ಈ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ.
ಮನೆಯ ಹಿಂದಿನ ಬಾಗಿಲನ್ನು ಮುರಿದು ಕಳ್ಳರು ಒಳ ನುಗ್ಗಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top