ಚೆಂಬು ಗ್ರಾಮದ ಉಂಬಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಗುರುವಾರ ವರದಿಯಾಗಿದೆ.
ಉಂಬಳೆಯ ಮಾನ್ಯದ ಎಂ.ಟಿ. ಭಾಸ್ಕರ ಅವರ ಮನೆಯಲ್ಲಿ ನ.21ರಂದು ಮಧ್ಯಾಹ್ನ ಮನೆಯವರು ಇಲ್ಲದ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಮನೆಗೆ ಬೆಂಕಿ ತಗುಲಿ ಹೊತ್ತಿ ಉರಿಯಿತು. ಪರಿಣಾಮವಾಗಿ
ಮನೆಯೊಳಗಿದ್ದ ಮನೆಯ ದಾಖಲೆಪತ್ರಗಳು, ಬಟ್ಟೆಗಳು, ನಗದು ಹಣ, ಚಿನ್ನಾಭರಣ, ಗೋಣಿಯಲ್ಲಿ ತುಂಬಿಸಿಟ್ಟಿದ್ದ ಅಡಿಕೆ ಸ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.