ಮದುವೆ ನಿಶ್ವಯವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಿಂದ ವರದಿಯಾಗಿದೆ.
ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ಕೀರ್ತನಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವತಿ.ಮೃತ ಯುವತಿ ಕೀರ್ತನಾವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮದುವೆ ನಿಶ್ಚಯ ಮಾಡಿ, ಒಂದೂವರೆ ತಿಂಗಳ ಹಿಂದೆ ನಿಶ್ಚಿತಾರ್ಥವನ್ನು ಮಾಡಿದ್ದರು. ಮುಂದಿನ ಕೆಲವು ದಿನಗಳಲ್ಲಿ ಯುವತಿಗೆ ಮದುವೆ ಮಾಡುವುದಕ್ಕೆ ಮನೆಯಲ್ಲಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು
ಆದರೆ ಯುವತಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಮನೆಯವರು ನೋಡಿ ಆಕೆಯನ್ನು ಕಾಪಾಡಿ ಅರೆ ಪ್ರಜ್ಞಾವಸ್ಥೆ ಸ್ಥಿತಿ ತಲುಪಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆ ಫಲಿಸದೆ ಯುವತಿ ನಿಧನರಾಗಿದ್ದಾರೆ.