ಅರಂತೋಡು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ನ.21ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಮಾರು 14 ಮನೆ ಗಳಿಗೆ ಸಂಪರ್ಕ ಕಲ್ಪಿಸುವ 30ವರ್ಷಗಳಿಂದ ಊರ್ಜಿತ ದಲ್ಲಿರುವ ಆರಂತೋಡು, ಅಳಿಕೆ -ಕಲ್ಲುಗದ್ದೆ ಪಂಚಾಯತ್ ರಸ್ತೆಯನ್ನು ಪಂಚಾಯತಿನ ಅವಾಹಗನೆ ತರದೆ ಖಾಸಗಿ ವ್ಯಕ್ತಿಗಳು ರಸ್ತೆಯನ್ನು ಬಂದ್ ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಅಲ್ಲದೆ ಸಭೆಯಲ್ಲಿ, ಬೀದಿ ದೀಪಗಳ ದುರಸ್ತಿ, ಕೆಟ್ಟು ನಿಂತಿರುವ ಸೋಲಾರ್ ದುರಸ್ತಿ ಹಾಗೂ ಆರಂತೋಡು ಏಲಿಮಲೆ ಪಿ. ಡಬ್ಲ್ಯೂ. ಇ. ರಸ್ತೆಯ ಬದಿ ಬೆಳೆದಿರು ಗಿಡ ಗಂಟೆಗಳನ್ನು ಪಿಂಡಿಮನೆ ವರೆಗೆ ತೆರವು ಮಾಡುತ್ತಿದ್ದು ಮುಂದೆ ಎಲಿಮಲೆ ವರೆಗೆ ಸುಮಾರು 8 ಕಿ. ಮೀ ವರೆಗೆ ತೆರವು ಮಾಡಲು ಅನುದಾನ ಇಲ್ಲ ಎಂಬ ಮಾಹಿತಿ ಇದ್ದು ,ಆ ಭಾಗದಲ್ಲಿ ವಿಪರೀತ ರಸ್ತೆ ಗೆ ಗಿಡ ಗಂಟಿಗಳು ಹಬಿದ್ದು ಮೊನ್ನೆ ಉಬರಡ್ಕ ದಲ್ಲಿ ನಡೆದಂತ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು ಅದನ್ನು ಕೂಡಲೇ ತೆರವು ಮಾಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಕ್ರಮ ವಹಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ಪುಷ್ಪಾದರ ಕೊಡಂಕೇರಿ, ಗಂಗಾಧರ ಗುಂಡ್ಲವನ, ಸರಸ್ವತಿ ಬಿಳಿ ಯಾರು, ಸುಜಯ ಲೋಹಿತ್ ಮೇಲಡ್ತಲೆ, ಮಾಲಿನಿ ವಿನೋದ್ ಉಳುವಾರು, ಹರಿಣಿ ದಿನೇಶ್ ದೇರಾಜೆ, ಕು l ಶ್ವೇತಾ ಅರಮನೆ ಗಾಯ ಹಾಜರಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಎಲ್ಲರನ್ನು ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದರು.
ಅರಂತೋಡು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ
![](https://mardani.in/wp-content/uploads/2024/11/InShot_20241121_205757212-1024x488.jpg)