ಅರಂತೋಡು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು (ನ.23) ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.
ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ.
9:30ಕ್ಕೆ ರಾಷ್ಟ್ರಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂಪಿ ಶ್ರೀನಾಥ್ ನೆರವೇರಿಸಲಿದ್ದಾರೆ. 9:45 ಕ್ಕೆ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ಮಾನ್ಯ ತಹಸಿಲ್ದಾರ್ . ಮಂಜುಳಾ ಇವರು ನೆರವೇರಿಸಲಿದ್ದಾರೆ.
ಪೂರ್ವಾಹ್ನ ಗಂಟೆ 10 ರಿಂದ ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿಗಳದ ಶ್ರೀ. ನರೇಂದ್ರ ರೈ ದೇರ್ಲ ನೆರವೇರಿಸಲಿದ್ದಾರೆ.
ಮೆರವಣಿಗೆಯ ಆಕರ್ಷಣೆಯಾಗಿ ಸಿಂಗಾರಿ ಮೇಳ,ಹುಲಿ ವೇಶ,ಸ್ಕೌಡ್ ಗೈಡ್ಸ್ ಬ್ಯಾಂಟ್ ಸೆಟ್,ಬುಲ್ ಬುಲ್ ಇರಲಿವೆ.ವೇದಿಯನ್ನು ಕೆಂಪು ಹಳದಿ ಬಣ್ಣದಿಂದ ಅಲಂಕಾರಿಸಲಾಗಿದೆ. ಕಾಲೇಜಿನ ಪರಿಸರವನ್ನು ಸುತ್ತ ಮುತ್ತ ಬಂಟಿಂಗ್ಸ್ ಗಳನ್ನು ಕಟ್ಟಿ ಅಲಂಕರಿಸಲಾಗಿದೆ.ವಾಹನಗಳು ಪಾರ್ಕ್ ಮಾಡಲು ಜಾಗ ಗುರುತಿಸಲಾಗಿದೆ
ಸಾಹಿತ್ಯ ಸಮ್ಮೇಳನಕ್ಕೆ ಒಂದು ಸಾವಿರ ಜನ ಸೇರುವ ನಿರೀಕ್ಷೆ ಮಾಡಲಾಗಿದೆ.ಒಂದು ಸಾವಿರ ಜನರಿಗೆ ಬೇಕಾದ ಮದ್ಯಾಹ್ನದ ಊಟ,ಬೆಳಿಗ್ಗೆ ಉಪಹಾರ,ಸಂಜೆಯ ಉಪಹಾರ ತಯಾರಿಸಲು ಪೂರ್ವ ತಯಾರಿ ಮಾಡಲಾಗಿದೆ.ಪುಸ್ತಕ ಮಳಿಗೆಗಳು ಇರಲಿವೆ.ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
.