ಚನ್ನಪಟ್ಟಣ, ಸಂಡೂರ್ ಮತ್ತು ಶಿಗ್ಗಾಂವಿ ಉಪ ಚುನಾವಣೆ ಕಾಂಗ್ರೇಸ್ ನ ಅಭೂತಪೂರ್ವ ಗೆಲುವಿಗೆ ಕಾಂಗ್ರೆಸ್ ಮುಖಂಡ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹರ್ಷ ವ್ಯಕ್ತ ಪಡಿಸಿರುತ್ತಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕಾಂಗ್ರೆಸ್ ಸರಕಾರಕ್ಕೆ ಜನಮಣ್ಣನೆ ನೀಡಿದ್ದು ಸರಕಾರದ ಪಂಚ ಗ್ಯಾರಂಟಿಗಳು ಮಹಿಳೆಯರಿಗೆ, ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಭರವಸೆಯನ್ನು ನೀಡಿದೆ. ಬಿ.ಜೆ.ಪಿ.ಯವರು ಸಿದ್ದರಾಮಯ್ಯ ಅವರಿಗೆ ಮುಡಾ ಹೆಸರಿನಲ್ಲಿ ಇ ಡಿ ಕಿರುಕುಳ, ವಕ್ಪ್ ನ ಹೆಸರಿನಲ್ಲಿ ಕೋಮು ಗಲಬೆಯನ್ನು ಸೃಷ್ಠಿಸುವ ಹುನ್ನಾರಕ್ಕೆ ಮತ್ತು ಹಿಂದು ಮುಸ್ಲಿಂ ವಿಭಜನಕ್ಕೆ ವಿರುದ್ಧವಾಗಿ ಮೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದರು.ಪ್ರಿಯಾಂಕ ಗಾಂಧೀ ಅವರ ವಿಜಯ ಅಭೂತ ಪೂರ್ವ ಎಂದು ಬಣ್ಣಿಸಿದ್ದಾರೆ.