ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಮೈಸೂರು ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ದೀಪಾವಳಿ ಸಾಂಕೇತಿಕ ಆಚರಣೆ ಕಾರ್ಯಕ್ರಮ ನ. 24ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ನಡೆಯಿತು.
ದ.ಕ.ಜಿಲ್ಲಾ ಗೌಡ ಸಂಘ ಮೈಸೂರು ಇದರ ಅಧ್ಯಕ್ಷ ವಿಶ್ವನಾಥ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಿ ಮಾತನಾಡಿ, “ಭಾಷೆ ಉಳಿಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಕೆಲಸ ಮಾಡುತ್ತಿದ್ದು, ಮುಂದಿನ ಪೀಳಿಗೆಗೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೈಸೂರು ಗೌಡ ಸಂಘದ ಮೂಲಕವೂ ಕಾರ್ಯಕ್ರಮ ಆಯೋಜನೆ ಮಾಡಿದ್ದಲ್ಲಿ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ” ಎಂದರು.
ನಿವೃತ್ತ ವಿಜ್ಞಾನಿ ಕೆ.ಆರ್ ವಿಜಯ್, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಸಿಯನ್ ರೋಡ್ರಿಗಸ್, ಕಾರ್ಯದರ್ಶಿ ನಾರಾಯಣ ಹೆಗಡೆ, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ತೇಜಸ್ವಿ ನಾಯಕ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು.
ಮೈಸೂರು ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಉದ್ಯಮಿ, ಕಲಾವಿದೆ ಡಾ. ಶ್ವೇತಾ ಮಡಪ್ಪಾಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮತ್ತು ನಿವೃತ್ತ ವಿಜ್ಞಾನಿ ಕೆ.ಆರ್ ವಿಜಯ್ ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ವಿಶ್ರಾಂತ ಉಪಕುಲಪತಿ ಕೊಳಂಬೆ ಚಿದಾನಂದ ಗೌಡ, ಸಂಘದ ಉಪಾಧ್ಯಕ್ಷ ಡಿ. ಬಿ. ಮುದ್ದಪ್ಪ, ಕಾರ್ಯದರ್ಶಿ ಚಿನ್ನಪ್ಪ ಕೊಲ್ಲಮೊಗ್ರ, ಖಜಾಂಜಿ ರಾಘವ ಗೌಡ ಕಡಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಪರಾರಿ ಸಂಘದ ಪರಿಚಯ ಮಾಡಿದರು.
ರುದ್ರಪ್ಪ ಪಿಂಡಿಮನೆ ಪ್ರತಿಭಾನ್ವಿತಾ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಚರಿಷ್ಮಾ ಚಿನ್ನಪ್ಪ ಪ್ರಾರ್ಥಿಸಿದರು.
ಚಿದಾನಂದ ಹೊಸಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಿಡರಾ ಚಿನ್ನಪ್ಪ ದೀಪಾವಳಿ ಹಬ್ಬದ ಮಹತ್ವ ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ಬಲಿಯೇಂದ್ರ ಪೂಜೆ ನೆರವೇರಿತು