ಅರಂತೋಡು ಅಡ್ಕಬಳೆ ಸಂಪರ್ಕ ರಸ್ತೆಯಲ್ಲಿರುವ ಚಿಕನ್ ಸೆಂಟರ್ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಬಕಾರಿ ಇಲಾಖೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದುವ ಬಂದಿದೆ.
ನ 23 ರಂದು ರಾತ್ರಿ 9:00ಗಂಟೆಗೆ ಅರಂತೋಡು ಗ್ರಾಮದ ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಗುಳಿಗರಾಜ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ತುಂಬಿದ ಸ್ಯಾಚೇಟ್ ಪ್ಯಾಕೇಟ್ಗಳನ್ನು ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿ ಪಿ ರವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ ಆರೋಪಿತನಾದ ದಿನೇಶ್ ಕೆ(46) ಎಂಬಾತನು ಕಾನೂನು ಬಾಹಿರವಾಗಿ ರೂ 1760/- ಮೌಲ್ಯದ 3.960 ಲೀಟರ್ (90 ಎಂ ಎಲ್ಲ 44 ಮದ್ಯದ ಸ್ಯಾಚೆಟ್ ಗಳು) ಮದ್ಯವನ್ನು ಅಂಗಡಿಯಲ್ಲಿ ಶೇಖರಿಸಿಕೊಂಡಿರುವುದು ಕಂಡುಬಂದಿರುತ್ತದೆ. ಈ ಮದ್ಯದ ಸ್ಯಾಚೆಟ್ ಗಳನ್ನು ವಶಕ್ಕೆ ಪಡೆದು, ಆರೋಪಿತ ದಿನೇಶ್ ಕೆ ಹಾಗೂ ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡಿರುವ ವೈನ್ ಶಾಪ್ ನ ಮಾಲಕನ ವಿರುದ್ದ ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 1965 ಪ್ರಕಾರ ಪ್ರಕರಣ ದಾಖಲಿಸಲಾಗಿರುತ್ತದೆ.ಅರಂತೋಡಿನ ಶಾಲಾ ಬಳಿ ಸೇರಿದಂತೆ ಇತರ ಕಡೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಅವರ ಅಂಗಡಿಗಳ ಮೇಲೆ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಏಕೆ ದಾಳಿ ನಡೆಸುತ್ತಿಲ್ಪ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.