ಪ್ರಜಾಧ್ವನಿ ಕರ್ನಾಟಕ ವತಿಯಿಂದ ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ರಾಷ್ಟ್ರಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದ್ದು ಸಂಪಾಜೆ ಗೇಟ್ ಬಳಿಯಿಂದ ಬುಧವಾರ ಚಾಲನೆ ನೀಡಲಾಯಿತು.
ಸುಳ್ಯ ತಹಶೀಲ್ದಾರ್ ಮಂಜುಳಾ ಎಮ್. ರಾಷ್ಟ್ರ ಧ್ವಜಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಶುಭಹಾರೈಸಿದರು.
ಪಿ.ಸಿ ಜಯರಾಮ, ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಅಶೋಕ್‌ಎಡಮಲೆ, ಭವಾನಿ ಶಂಕರ್ ಕಲ್ಮಡ್ಕ, ಭರತ್ ಕುಕ್ಕುಜಡ್ಕ, ರೈತ ಸಂಘ ಜಿಲ್ಲಾ ಪದಾಧಿಕಾರಿ ದಿವಾಕರ ಪೈ, ಅಶ್ರಫ್, ಕರ್ನಾಟಕ ಸರಕಾರ ಕಟ್ಟಡ & ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಘದ ಸದಸ್ಯ ಕೆ. ಪಿ.ಜಾನಿ, ಸುಳ್ಯ ಕಂದಾಯ ನಿರೀಕ್ಷಕ ಅವಿನ್ ರಂಗತ್ತ ಮಲೆ, ಲಕ್ಷ್ಮೀಶ ಗಬಲಡ್ಕ, ಆನಂದ ಬೆಳ್ಳಾರೆ, ಅಚ್ಚುತಾ ಮಲ್ಕಜೆ, ಮಾಧವ ಗೌಡ ಸುಳ್ಯಕೋಡಿ, ಮಹೇಶ್ ಬೆಳ್ಳಾಲ್ಕರ್, ಬಿಟ್ಟಿ ನೆಡು ನಿಲಂ, ಕೇಶವ ಮೊರಂಗಲ್ಲು, ನಂದ ರಾಜ್ ಸಂಕೇಶ್, ಬೆಟ್ಟ ಜಯರಾಮ್ ಭಟ್, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್, ಮಹಮ್ಮದ್ ಕುಂಞ ಗೂನಡ್ಕ, ಅಬುಶಾಲಿ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಯು. ಬಿ ಚಕ್ರಪಾಣಿ, ಕೊಡಗು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪಿ.ಎಲ್, ರಿತಿನ್ ಡೆಮ್ಮಲೆ, ವಸಂತ ಪೆ ಡ್ಕ, ಸಂಪಾಜೆ ಗ್ರಾ.ಪಂ ಸದಸ್ಯರಾದ ಲಿಸ್ಸಿ ಮೊನಾಲಿಸಾ, ಸುಶೀಲ, ಪ್ರಮೀಳಾ ಪೆಲ್ತಡ್ಕ,ಸೌಮ್ಯ ಕಡೆ ಪಾಲ, ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ರಾಷ್ಟ್ರ ಧ್ವಜ ಭವ್ಯ ರಥದ ವಾಹನಮೆರವಣಿಗೆಯು ಕಲ್ಲುಗುಂಡಿ, ಅರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಕಲ್ಲು ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಾಗಿ ಬಂದು, ಸುಳ್ಯ ದ ಜ್ಯೋತಿ ಸರ್ಕಲ್ ಬಳಿಯಿಂದ ಪಾದಯಾತ್ರೆಯ ಮೂಲಕ ಸಾಗಿ ಬಂದು ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ . ಬಳಿಕ ಸುಳ್ಯದ ಖಾಸಾಗಿ ಬಸ್ಸು ನಿಲ್ದಾಣ ಬಳಿ ಸಮರೋಪ ಸಮಾರಂಭ ನಡೆಯಲಿದೆ.