ಸುಳ್ಯ: ಸುಳ್ಯ ಗಾಂಧಿನಗರದಲ್ಲಿ ತಳ್ಳು ಗಾಡಿಯಲ್ಲಿ ಟೀ ಅಂಗಡಿ ತೆರೆದು ಕಾರ್ಯಚರಿಸುತ್ತಿರುವ ಟೀ ಅಂಗಡಿಯ ಮಾಲೀಕ ವೆಂಕಪ್ಪ ಗೌಡ ನಿಧನ ಹೊಂದಿರುವ ಹಿನ್ನಲೆಯಲ್ಲಿ
ಪ್ರಗತಿ, ಶಿವ, ಲೈಫ್ ಕೇರ್ ಹಾಗೂ ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಮಾಲಕರು ವೆಂಕಪ್ಪ ಗೌಡರ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ವೆಂಕಪ್ಪ ಗೌಡ ನಡುಮನೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಂಬುಲೆನ್ಸ್ ಚಾಲಕ ಮಾಲಕರು ತಮ್ಮ ಸಂತಾಪವನ್ನು ಸೂಚಿಸಿದರು. ಸುಳ್ಯ ಪೇಟೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಮೃತ ದೇಹವನ್ನು ಕೊಡಿಯಾಲ ಬೈಲು ರುಧ್ರಭೂಮಿಗೆ ಕೊಂಡೊಯ್ದುರು.ಬಳಿಕ ಕುಟುಂಬದವರು ಸೇರಿ ಅಂತ್ಯಸಂಸ್ಕಾರ ನಡೆಸಿದರು.