ಉಬರಡ್ಕದ ಹುಳಿಯಡ್ಕ ಎಂಬಲ್ಲಿ ಕಡೆವೆಯೊಂದು ಸಂಚರಿಸುತ್ತಿದ್ದ ಬೈಕ್ ಮೇಲೆ ಹಾರಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಉಬರಡ್ಕದ ಬಳ್ಳಡ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ನೀರು ಹಾಕಲೆಂದು ಸುಳ್ಯ ಕಡೆಯಿಂದ ಭಾನುಪ್ರಕಾಶ್ ಪೆರುಮುಂಡ ಮತ್ತು ಶಿವಪ್ರಸಾದ್ ಬಳ್ಳಡ್ಕ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹುಳಿಯಡ್ಕ ಎಂಬಲ್ಲಿ ಕಡವೆಯೊಂದು ಏಕಾಏಕಿ ರಸ್ತೆಗೆ ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ದ್ವಿಚಕ್ರ ವಾಹನದೊಂದಿಗೆ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು. ಇದೀಗ ಸವಾರರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.