(ಕವನ) ಉತ್ತರದ ದೋಣಿ

ಹೊರಟಿಹರೆಲ್ಲರು ಪ್ರಶ್ನೆಗಳ ಹಿಂದೆ… ಉತ್ತರ ಸಿಗಬಹುದೆಂಬ ನಂಬಿಕೆಯು ಮುಂದೆ…
ಮೌನವೆಂಬ ಸಾಗರದಿ ಕಣ್ಮರೆಯಾದ ಮುತ್ತಿನಂತೆ… ಪ್ರೀತಿಯ ಅಮಲಿನಲಿ ಮುಳುಗಡೆಯಾದ ಮನದಂತೆ…
ಮಳೆಹನಿಯ ಬಿಂದುವಿನಲ್ಲಿ ಹೊಮ್ಮಿದ ಹೊಳಪಂತೆ… ಅಗ್ನಿಯ ಜ್ವಾಲೆಯಲಿ ಬೂದಿಯಾದ ನೆನಪುಗಳಂತೆ…
ಮುಳ್ಳುಗಳ ಹಾದಿಯು ಹಬ್ಬಿಹುದು ಕಡಲಾಚೆಗೆ…
ದಾಟಲು ಮನ ತವಕಿಸುವುದು ದಿನ ಬೆಳಗೆ…
ನಿನ್ನೆಯ ರಾತ್ರಿಗಳೆಲ್ಲ ನೆನಪಿನ ಗೊಂಚಲುಗಳು…
ಮುಂದಿನ ಪುಟಗಳಿಗೆ ನಂಬಿಕೆಯ ಮಹಲುಗಳು…
ಮನವೆಲ್ಲ ಮುದುಡಿಹುದು ಸಂಜೆಯ ಅಂಬುಜದಂತೆ..
ಕನಸೆಲ್ಲ ಅರಳಿಹುದು ಹೊರಬಿದ್ದ ಮುತ್ತಿನಂತೆ…
ಉತ್ತರಗಳಿಗು ಪ್ರಶ್ನೆಯೇ ಜೀವನದ ಉತ್ತರವೂ…
ಕಟ್ಟಿಟ್ಟ ಬುತ್ತಿಯು ನೆನೆಸದ ಮರಣವೂ… ನಡೆಯುತ್ತಿರು ನೀನು ನೆನಪುಗಳ ಹಿಂದೆ…
ದಡ ಸೇರುವುದು ದೋಣಿ ಉತ್ತರಗಳು ನಿನ್ನ ಮುಂದೆ!!!
✍️- ಹಿತಾಶ್ರೀ ಪಟ್ಟೆ

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top