ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯ ಅಂಗಡಿಗಳಲ್ಲಿ ನ.29ರಂದು ತಂಬಾಕು ಕಾರ್ಯಾಚರಣೆ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಢಾ.ನಂದಕುಮಾರ್, ಸುಳ್ಯ ಫೋಲಿಸ್ ಠಾಣೆಯ ಉಪನೀರಿಕ್ಷಕರಾದ ಸಂತೋಷ್, ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸರಿತ ಓಲ್ಗಾ ಡಿಸೋಜ, ಕಲ್ಲುಗುಂಡಿ ಹೊರಠಾಣೆಯ ಸಹಾಯಕ ಉಪನೀರಿಕ್ಷರಾದ ತಾರನಾಥ್, ಬೀಟ್ ಪೋಲಿಸ್ ರಾಜು ಆರೋಗ್ಯ ಇಲಾಖೆಯ ಆಶಿಕ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮತ್ತು ರಾಜಶೇಖರ್ ತಾಲೂಕು ಲೇಖಪತ್ರ ವ್ಯವಸ್ಥಾಪಕ ಹಾಗೂ ಚಂದ್ರಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.