ಶತಮಾನೋತ್ಸವದ ಹೊಸ್ತಿಲಲ್ಲಿರುವ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ ಮತ್ತು ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮವು ದೇವಚಳ್ಳ ಶಾಲೆಯಲ್ಲಿ ನಡೆಯಿತು.
ಎಸ್ ಡಿ ಯಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ನಿವೃತ್ತ ಶಿಕ್ಷಕ ಕೇಪಳಕಜೆ ಪುರುಷೋತ್ತಮ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಶಾಲೆಯ ಯಶಸ್ಸು ವಿದ್ಯಾರ್ಜನೆ ಜ್ಞಾನಾರ್ಜನೆ ಇನ್ನಷ್ಟು ವಿಸ್ತರಿಸಲಿ ಎಂಬುದಾಗಿ ಶುಭಾಶಯ ಕೋರಿದರು. ಶತಮಾನೋತ್ಸವದ ಲೋಗೋ ವನ್ನು ದೇವಚಳ್ಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲೀಲಾವತಿ ಸೇವಾಜೆ ಬಿಡುಗಡೆಗೊಳಿಸಿದರು. ಲಕ್ಕಿ ಕೂಪನ್ ಅನ್ನು ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ ಗೌಡ ಕೆರೆಮೂಲೆ ಇವರು ಶಾಲೆಯ ಇತಿಹಾಸ ಶತಮಾನದ ಸಂಭ್ರಮದ ತಯಾರಿಯ ಬಗ್ಗೆ ವಿವರಿಸಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎ ವಿ ತೀರ್ಥರಾಮ ಇವರು ಶಾಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಶತಮಾನೋತ್ಸವದ ಧನ ಸಂಗ್ರಹ ರೂಪುರೇಷೆಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ ಪಂಚಾಯತ್ ಉಪಾಧ್ಯಕ್ಷರಾದ ವೇಣುಗೋಪಾಲ ಪುನುಕುಟ್ಟಿ, ಸದಸ್ಯರಾದ ವಂದನಾ ಹೊಸತೋಟ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕೇರ, ದೇವಚಳ್ಳ ಪೂರ್ವ ಪ್ರಾಥಮಿಕ ತರಗತಿಯ ಅಧ್ಯಕ್ಷರಾದ ರಾಜೇಶ್ ಬಟ್ಟಕಜೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಬಿ ವಿ ಉಪಸ್ಥಿತರಿದ್ದರು.ಸವಿತಾ ಚಾಕಟೆ ಮೂಲೆ ಸ್ವಾಗತಿಸಿ, ಹರಿಪ್ರಸಾದ್ ಬಿ ವಿ ವಂದಿಸಿದರು. ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು