ಕೇರಳ ರಾಜ್ಯದ ಆಲಪುಝ ಜಿಲ್ಲೆಯ ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳು ಸಂಚರಿಸುತ್ತಿದ್ದ ಟವೇರಾ ಕಾರ್ ಹಾಗೂ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಪ್ರಥಮ ವರ್ಷ ಮೆಡಿಕಲ್ ಅಧ್ಯಾಯನ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದು ಕಾರಿನಲ್ಲಿ 12 ವಿಧ್ಯಾರ್ಥಿಗಳು ಇದ್ದರು ಎನ್ನಲಾಗಿದೆ. 12 ವಿಧ್ಯಾರ್ಥಿಗಳ ಪೈಕಿ ಐವರು ಮೃತಪಟ್ಟಿರುವುದಾಗಿ ಸ್ಥಳೀಯ ಮೂಲಗಳು ವರದಿ ಮಾಡಿದೆ.
ಇನ್ನುಳಿದ 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಯಂಗುಳಂ ಕಡೆಯಿಂದ ಎರ್ನಾಕುಲಂ ಕಡೆಗೆ ಹೊರಟಿದ್ದ ಟವೆರಾ ಕಾರು, ಗುರುವಾಯೂರ್ ಕಡೆಯಿಂದ ಕಾಯಂಗುಳಂ ಕಡಗೆ ಹೊರಟಿದ್ದ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದೆ.
ಕೇರಳದಲ್ಲಿ ಭೀಕರ ಕಾರು ಬಸ್ ಅಪಘಾತ : ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ
