ಸುಳ್ಯ ತಾಲೂಕಿನ ಬೆಳ್ಳಾರೆ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ NIA ನಾಪತ್ತೆಯಾಗಿರುವ ಆರೋಪಿ ನೌಷದ್ ಮನೆ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದೆ. ಬೆಂಗಳೂರಿನಿಂದ ಆಗಮಿಸಿದ 5 ಜನರ NIA ತಂಡ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಷದ್ ಮನೆಗೆ ಇಂದು ಮುಂಜಾನೆ 5.30ರ ಸುಮಾರಿಗೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದೆ. ನೌಷದ್ ಪತ್ತೆಗಾಗಿ NIA 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. NIA ಅಧಿಕಾರಿಗಳಿಗೆ ಬೆಳ್ತಂಗಡಿ ಪೊಲೀಸರು ಸಾಥ್ ನೀಡಿದ್ದಾರೆ.