ಯುವತಿಯ ಕೆಟ್ಟು ಹೋದ ಕಾರು ರಿಪೇರಿ ಮಾಡಿ ಕೊಟ್ಟು ಶಫಿನ್‌’ನಿಂದ ಜ್ಯೂಸ್‌’ಗೆ ಅಮಲು ಪದಾರ್ಥ ಬೆರೆಸಿ ದೈಹಿಕ ಸಂಪರ್ಕ

ಮಹಿಳಾ ಡ್ರೈವರ್ ಗೆ ನೆರವಾಗಲು ಬಂದು ಕಾರು ರಿಪೇರಿ ಮಾಡಿ ಕೊಟ್ಟು ಯುವಕನೊಬ್ಬ ಕೆಲವು ದಿನಗಳ ಬಳಿಕ ಆಕೆಗೆ ಜ್ಯೂಸಿನಲ್ಲಿ ಅಮಲು ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ ಹಾಗೂ ಆಕೆಯ ಬ್ಯಾಗಿನಲ್ಲಿದ್ದ ಹಣ ಕಳವು ಮಾಡಿರುವ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಫಿನ್ ಪ್ರಕರಣದ ಎ.1 ಆರೋಪಿ. ಆತನ ಅಣ್ಣ ಹಾಗೂ ಅತ್ತಿಗೆಯ ಮೇಲೂ ಸಂತ್ರಸ್ತೆ ದೂರು ನೀಡಿದ್ದಾರೆ. ಸಂತ್ರಸ್ತೆ ಯುವತಿ ಕೊಡಿಯಾಲಬೈಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು.
ಆರೋಪಿ ಸಂತ್ರಸ್ಥೆ ಯುವತಿಯ ಮೊಬೈಲ್‌ ನಂಬ‌ರ್ ಪಡೆದುಕೊಂಡಿದ್ದ. ಅ. 8ರಂದು ಯುವತಿಯ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ವಾಸವಿದ್ದ ಯುವತಿ ಅದರ ರಿಪೇರಿಗಾಗಿ ಶಫಿನ್ ನೆರವು ಕೇಳಿದ್ದಾಳೆ.ಬಳಿಕ ಟೆಕ್ನಿಷಿಯನ್ ಕರಕೊಂಡು ಬಂದು ಶಫಿನ್ ಪ್ರಿಡ್ಜ್ ರಿಪೇರಿ ಮಾಡಿಸಿದ್ದಾನೆ. ಬಳಿಕ ರಿಪೇರಿಯನನ್ನು ಬಿಟ್ಟು ಬರಲು ಹೊರಗೆ ಹೋಗಿದ್ದು, ವಾಪಸ್ಸು ಬರುವವರೆಗೆ ಫ್ರಿಡ್ಜ್ ಆನ್ ಮಾಡಬೇಡಿ ಎಂದು ಹೇಳಿದ್ದ.
ಹಿಂದಿರುಗಿ ಶಫಿನ್ ಬರುವ ಹಣ್ಣು ಹಾಗೂ ಜ್ಯೂಸ್ ತಂದಿದ್ದು, ಅದನ್ನು ಕುಡಿದ ಯುವತಿ ನಿದ್ದೆಗೆ ಜಾರಿದ್ದಾಳೆ. ಎಚ್ಚರಗೊಂಡ ವೇಳೆ ಅನುಮಾನದಿಂದ ವಿಚಾರಿಸಿದಾಗ ದೈಹಿಕ ಸಂಪರ್ಕ ನಡೆಸಿರುವ ವಿಷಯ ತಿಳಿಸಿ ಕೃತ್ಯವನ್ನು ಈಗಾಗಲೇ ವಿಡಿಯೋ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಮುಂದೆಯೂ ದೈಹಿಕ ಸಂಪರ್ಕಕ್ಕೆ ಸಹಕರಿಸಬೇಕು ಎಂದು ಒತ್ತಡ ಹಾಕಿದ ಆತ ತಪ್ಪಿದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ವಾಪಸ್ಸು ಹೋಗುವಾಗ ಯುವತಿಯ ಕಾರನ್ನು ತನ್ನ ಜತೆ ತೆಗೆದುಕೊಂಡು ಹೋಗಿದ್ದಾನೆ.
ಈ ನಡುವೆ ಯುವತಿಯ ಮನೆಯವರು ಕಾರಿನ ಬಗ್ಗೆ ವಿಚಾರಿಸಿದ್ದು, ಕಾರು ಪಡೆದುಕೊಳ್ಳಲು ಯುವತಿ ಅ. 25ರಂದು ದೇರಳಕಟ್ಟೆಯ ಆತ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾಳೆ. ಈ ವೇಳೆ ಕಾರು ಪಾರ್ಕಿಂಗ್ ಸ್ಥಳದಲ್ಲಿದ್ದು, ಅದನ್ನು ವಾಪಸ್ಸು ನೀಡುವಂತೆ ಶಫೀನ್‌ ತಾಯಿಯಲ್ಲಿ ಯುವತಿ ವಿನಂತಿಸಿದ್ದಾಳೆ. ಈ ವೇಳೆ ಶಫಿನ್‌ನ ಅಣ್ಣ ಮೊಹಮ್ಮದ್ ಶಿಯಾಬ್ ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ.ಈ ಪ್ರಕರಣದ ಕುರಿತು ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
ಮಾರ್ದನಿ ವಾಟ್ಸಪ್‌ ಗ್ರೂಪ್‌ಗೆ ಸೇರಿ