ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿ ವಾರ್ಷಿಕ ಕ್ರೀಡಾಕೂಟ ‘ಅಖಾಡ -2024’ ದಿನಾಂಕ 6.12.2024 ರಿಂದ 10.12.2024 ರ ವರೆಗೆ ನಡೆಯಲ್ಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ದಿನಾಂಕ 09.12.2014ರಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಇವರು ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಲೀಲಾಧರ್ ಡಿ ವಿ , ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ. ಹರ್ಷಿತಾ ಎಂ, ಕೆ ವಿ ಜಿ ಆಯುರ್ವೇದ ಫಾರ್ಮಸಿ ಮತ್ತು ರಿಸರ್ಚ್ ಸೆಂಟರಿನ ಸಿ ಇ ಒ ಆದ ಡಾ. ಪುರುಷೋತ್ತಮ ಕೆ ಜಿ, ವಾರ್ಷಿಕ ಕ್ರೀಡಾಕೂಟದ ಸಂಚಾಲಕರಾದ ಡಾ. ಹರ್ಷವರ್ಧನ ಕೆ, ವಾರ್ಷಿಕ ಕ್ರೀಡಾ ಸಮಿತಿಯ ಸದಸ್ಯರುಗಳು, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಸಂಘದ ನಾಯಕಿ ಡಾ. ಅನುಷಾ ಮಡಪ್ಪಾಡಿ,
ವಿದ್ಯಾರ್ಥಿ ಸಂಘದ ನಾಯಕ ಮಿ. ಶೀತಲ್ ಗೌಡ, ವಿದ್ಯಾರ್ಥಿನಿಯರ ಪ್ರತಿನಿಧಿ ಕು. ನಿತ್ಯಾ ದಾಸ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕ್ರೀಡಾಹಬ್ಬದಲ್ಲಿ ವಾಲಿಬಾಲ್, ಶೆಟ್ಟಲ್ ಬ್ಯಾಡ್ಮಿಂಟನ್, ಟೆನ್ನಿಕಾಯಿಟ್, ಕ್ರಿಕೆಟ್, ಅಥ್ಲೆಟಿಕ್ಸ್, ಕ್ಯಾರಂ, ಚದುರಂಗ ಇತ್ಯಾದಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಕೂಟ ಆಯೋಜಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಸಂಭ್ರಮೋಲ್ಲಾಸದಿಂದ ಮತ್ತು ತೀವ್ರ ಪೈಪೋಟಿಯೊಂದಿಗೆ ಹುಮ್ಮಸ್ಸಿನಿಂದ ಭಾಗವಹಿಸಲ್ಲಿದ್ದಾರೆ
.