ಕುಕ್ಕುಜಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲ್ಲೂಕು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಟ್ಯೂಷನ್ ಕ್ಲಾಸ್ ನ್ನು ಡಿಸೇಂಬರ್ 9 ರಂದು ಪೈಲಾರ್ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಪೈಲಾರ್ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ನಾರಾಯಣ ಕೊಡ್ತುಗುಳಿ ಉದ್ಘಾಟನೆ ಮಾಡಿ ಶುಭಹಾರೈಸಿದರು:
ದೊಡ್ಡತೋಟ ವಲಯ ಜನಜಾಗೃತಿ ವಲಯಧಕ್ಷರಾದ ಶ್ರೀ ಬಾಲಕೃಷ್ಣ ಬೋಳ್ಳೂರು ಮಾತನಾಡಿ ಪ್ರಕೃತಿ ನಾಶಕ್ಕೆ ಮಾನವರೇ ಕಾರಣ ಸಾವಿರಾರು ವಿದ್ಯಾರ್ಥಿಗಳು ಕಲಿತು ಉನ್ನತ ಸ್ಥಾನಕ್ಕೆ ತಲುಪಲು ಈ ಶಾಲೆ ಕಾರಣ ವಾಗಿದೆ ಈ ಟ್ಯೂಷನ್ ತರಗತಿ ನಿಮ್ಮ ಭವಿಷ್ಯಕ್ಕೆ ದಾರಿ ದೀಪಾವಗಲಿ ಎಂದು ಸಲಹೆ ನೀಡಿದರು
ಮುಖ್ಯ ಅತಿಥಿ ಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡರವರು ಮಾತನಾಡಿ ಶಾಲಾ ಮಕ್ಕಳಿಗೆ ತಮ್ಮ ಕಲಿಕೆಯ ಬಗ್ಗೆ ಮಾಹಿತಿ ಯನ್ನು ನೀಡಿ 10 ನೇ ತರಗತಿ ಯವರಿಗೆ 3ತಿಂಗಳ ಕಾಲ ಉಚಿತ ಟ್ಯೂಷನ್ ತರಗತಿ ನಡೆಯಲಿದೆ ತಾವು 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಒಳ್ಳೆಯ ಪ್ರಜೆಯಾಗಿ ಮುಂದೆ ಬರಬೇಕು ಶಾಲೆಗೆ ಮತ್ತು ಹೆತ್ತವರಿಗೆ ಒಳ್ಳೆಯ ಹೆಸರು ಗೌರವ ಮತ್ತು ಸಂಸ್ಕಾರ ಕಲಿತು ಕೊಳ್ಳಿ ಎಂದು ಶುಭ ಹಾರೈಸಿದರು
ಸಭೆಯ ಅಧ್ಯಕ್ಷತೆಯನ್ನು ಚೊಕ್ಕಡಿ ಪ್ರೌಢಶಾಲೆಯ ಸಂಚಾಲಕರಾದ ಶ್ರೀ ರಾಧಾಕೃಷ್ಣ ಬೊಳ್ಳೂರುರವರು ಮಾತನಾಡಿ ಶಿಕ್ಷಕರು ಮತ್ತು ಮಕ್ಕಳ ಸಂಬಂಧ ಸದೃಢ ವಾಗಿರಬೇಕು ಇಂದಿನ ಮಕ್ಕಳೇ ಮುಂದಿನ ದೇಶ ಕಟ್ಟುವ ಪ್ರಜೆಗಳಾಗಿ ಹೊರಬರಬೇಕು ಈ ಟ್ಯೂಷನ್ ತರಗತಿ ಮಕ್ಕಳಿಗೆ ಉತ್ತಮ ಅಂಕಗಳಿಸಲು ಪ್ರೇರಣೆಯಾಗಿದೆ ಎಂದು ಶುಭಹಾರೈಸಿದರು
ವೇದಿಕೆಯಲ್ಲಿ ಈ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸಂಕೀರ್ಣ ಚೊಕ್ಕಡಿ : ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿಶ್ವನಾಥ ಮೂಕ ಮಲೆ ಪೈಲಾರ್ ಸೇವಾಪ್ರತಿನಿಧಿ ಶ್ರೀ ಚಂದ್ರಪ್ರಕಾಶ್ :ಒಕ್ಕೂಟ ಪದಾಧಿಕಾರಿಗಳು ಸಹಶಿಕ್ಷಕ ವೃಂದ : ಪೋಷಕರು ಉಪಸ್ಥಿತರಿದ್ದರು :
ಜಾಲ್ಸುರು ವಲಯದ ಮೇಲ್ವಿಚಾರಕರಾದ ಶ್ರೀ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ :ಸುಳ್ಯ ತಾಲ್ಲೂಕು ಜ್ಞಾನ ವಿಕಾಸ ಸಮನ್ವಯಧಿಕಾರಿಗಳಾದ ಶ್ರೀಮತಿ ಲಕ್ಷ್ಮೀ ಎಲ್ಲರನ್ನು ಸ್ವಾಗತಿಸಿ :ಸಹ ಶಿಕ್ಷಕರಾದ ಶ್ರೀಮತಿ ಸಂದ್ಯಾ ವಂದಿಸಿದರು