ಅರಂತೋಡು : ಅರಂತೋಡು ನಿವಾಸಿ ಹಾಜಿ ಅಹಮ್ಮದ್ ಕುಂಞ ಪಟೇಲ್ ಶುಕ್ರವಾರ ಮುಂಜಾನೆ ಮನೆಯಲ್ಲಿ ನಿಧನರಾದರು.
ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಮತ್ತು ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆಗೈದಿದ್ದರು. ಅರಂತೋಡು ನಿವಾಸಿಯಾಗಿರುವ ಬದ್ರುದ್ದೀನ್, ನಾಸೀರುದ್ದೀನ್, ಸೈಫುದ್ದೀನ್, ಹಬೀಬ್ ರಹಿಮಾನ್, ಸಲಾಹುದ್ದೀನ್, ಜಲಾಲುದ್ದೀನ್ ಮತ್ತು ಮರ್ಹೂಮ್ ಅಮೀನ್ , ಮರ್ಹೂಮ್ ಶಿಹಾಬ್ ರವರ ಸಹಿತ ನಾಲ್ಕು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.