ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಬದುಕಬೇಕೆಂದು ಪಂಜ ವಲಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ ಹೇಳಿದರು.
ಅವರು ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇಲ್ಲಿಯ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ ಕ್ರತಿ
ಎದ್ದೇಳು ಮಾನವ ಮತ್ತು ನೀತಿ ತತ್ವ ಲಹರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪುರುಷ ಪ್ರಧಾನವಾದ ನಮ್ಮ ದೇಶ ಈಗ ತುಂಬಾ ಬದಲಾಗಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷನಿಗೆಸಮನಾಗಿಕಾರ್ಯನಿರ್ವಾಹಿಸುತ್ತಿದ್ದಾರೆ.ಸ್ವಾಮೀಜಿಯವರು ಪುಸ್ತಕ ಬರೆದು ಉಚಿತವಾಗಿ ವಿತರಿಸುತ್ತಿರುವುದು ಶ್ರೇಷ್ಠ ಕಾರ್ಯ ಎಂದು ಹೇಳಿದರು.
ಶ್ರೀ ಯೋಗೇಶ್ಚರಾನಂದ ಸರಸ್ಚತಿ ಸ್ವಾಮೀಜಿ ಮಾತನಾಡಿ ಸತ್ಯ ನ್ಯಾಯ,ಧರ್ಮ ಮಾರ್ಗದಲ್ಲಿ ನಾವು ನಡೆದರೆ ಭಗವಂತ ಮೆಚ್ಚುತ್ತಾನೆ.ಈ ಹಿನ್ನಲೆಯಲ್ಲಿ ನಾವು ಸತ್ಯ,ಧರ್ಮ,ನ್ಯಾಯ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.
ಸುಳ್ಯ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಉಪನ್ಯಾಸಕ ಡಾ.ಹರ್ಷವರ್ದನ ಹಾಗೂ ಶಿಕ್ಷಕಿ ಸುನಂದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಕೋಳಿವಾಡ ವಂದಿಸಿದರು.
ಬೆಳಿಗ್ಗೆ ಗೀತಾ ಜಯಂತಿ ಆಚರಣೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ,ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.