ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 5 ನೇ ವಾರ್ಷಿಕ ಮಜಿಲಿಸ್ ನ್ನೂರ್ ಹಾಗೂ ಇಸ್ಲಾಮಿಕ್ ಕಥಾ ಪ್ರಸಂಗವು ಅರಂತೋಡು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಿರ್ಮಿಸಲಾದ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ವೇಧಿಕೆಯಲ್ಲಿ ನಡೆಯಿತು. ಮಜಿಲಿಸ್ ನ್ನೂರ್ ನೇತೃತ್ವವನ್ನು ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕರವರು ವಹಿಸಿ ಮಾತನಾಡಿ ನಮ್ಮ ಎಲ್ಲಾ ಪ್ರವರ್ತಿಗಳು ಶುದ್ಧ ಮನಸ್ಸಿನಿಂದ ಕೂಡಿರಬೇಕು ನಮ್ಮಲ್ಲಿ ದ್ವೇಷ ಅಸೂಯೆ ವಂಚನೆ ಇರಬಾರದೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಯುವಕರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು, ಪರಧರ್ಮ ಸಹಿಷ್ಣುತೆಯೊಂದಿಗೆ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಸ್ಥಳೀಯ ಖತೀಬರಾದ ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಉಧ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸಮಸ್ತ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಮೀದ್ ಹಾಜಿ, ಐವರ್ನಾಡು ಜುಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಫೈಝಿ, ಬಿಳಿಯಾರು ಮಸೀದಿ ಖತೀಬರಾದ ಸಂಶುದ್ಧೀನ್ ಫೈಝಿ, ಸುಳ್ಯ ಕ್ಲಸ್ಟರ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ರಝಾಕ್ ಹಾಜಿ ಕರಾವಳಿ, ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ ಉಧ್ಯಮಿ ಫೈಝಲ್ ಕಟ್ಟೆಕ್ಕಾರ್, ದಿಕ್ರ್ ಸ್ವಲಾತ್ ಮಜಿಲಿಸ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಕುಕ್ಕುಂಬಳ, ಉಧ್ಯಮಿ ಮಹಮ್ಮದ್ ಕುಂಇ’ ಉಪ್ಪಿನಂಗಡಿ, ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಕುಂಬ್ರ, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ಅಧ್ಯಕ್ಷ ಜುಬೈರ್ ಎಸ್.ಇ, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ತಾಜುದ್ಧೀನ್ ಅರಂತೋಡು, ಮೊದಲಾದವರು ಉಪಸ್ಥಿತರಿದ್ದರು. ಸದರ್ ನೌಶಾದ್ ಅಝ್ಹರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಗಾಯಕ ಎಂ.ಎಚ್.ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರು ಇಸ್ಲಾಮಿಕ್ ಚರಿತ್ರೆಯ ಕಥಾ ಪ್ರಸಂಗವನ್ನು ನಡೆಸಿಕೊಟ್ಟರು.
*ಟಿ.ಎಂ ಶಹೀದ್ ತೆಕ್ಕಿಲ್ ಮತ್ತು ಅಬ್ದುಲ್ ರಹಿಮಾನ್ ಸಂಕೇಶ್ ರಿಗೆ ಸನ್ಮಾನ*
ಸಮಾರಂಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಉಧ್ಯಮಿ ಅಬ್ದುಲ್ ರಹಿಮಾನ ಸಂಕೇಶ್ ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು