ಸುಳ್ಯ ತಾಲೂಕಿನಲ್ಲಿ ಈ ವರ್ಷ ಅಡಿಕೆ ಕ್ರಷಿಗೆ ಎಲೆ ಚುಕ್ಕಿ ರೋಗ ಬಾಧಿಸಿ ರೈತರು ಬಹಳ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಇನ್ನೇನು ವಿವಿಧ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.ಎಲ್ಲ ಕಾರ್ಯಕ್ರಮಗಳಿಗೆ ಧನ ಸಹಾಯ ಅಗತ್ಯ ಇರುವುದರಿಂದ ಧನ ಸಹಾಯಕ್ಕಾಗಿ ಮನೆ ಮನೆ ತೆರಳುವುದು,ಸಂಗ್ರಹಿಸುವುದು ಸಾಮಾನ್ಯವಾಗಿದೆ.ಸುಳ್ಯ ಪರಿಸರದಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹೆಚ್ಚು ಬಾಧಿಸಿರುವುದರಿಂದ ಇಲ್ಲಿಯ ರೈತರು ಅತೀ ಹೆಚ್ಚು ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ರೈತರೊಬ್ಬರು ತಮ್ಮ ಮನೆಯ ಮುಂದೆ ಬ್ಯಾನರ್ ಅಳವಡಿಸಿದ್ದಾರೆ.ಅದರಲ್ಲಿ ಕ್ರಷಿ ಉತ್ವತಿಯ ಕುಸಿತದಿಂದ ಎಲ್ಲಾ ರೀತಿಯ ಧನ ಸಹಾಯಗಳನ್ನು ಸ್ಥಗೀತಗೊಳಿಸಲಾಗಿದೆ ಗಮನಿಸಿ ಸಹಕರಿಸಿ ಎಂದು ಬರೆಯಲಾಗಿದೆ. ಈ ಬ್ಯಾನರ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.