ತೊಡಿಕಾನ ಗ್ರಾಮದ ಅಡ್ಯಡ್ಕದ ವಿಶೇಷಚೇತನ ಹುಡುಗ ವೇಣುಪ್ರಸಾದ್ ರವರಿಗೆ ಸುಲಭವಾಗಿ ನಡೆಯಲು ಸಾಧನ ಸಲಕರಣೆಯನ್ನು ಪುತ್ತೂರಿನ ಎಂವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಮುಖ್ಯಸ್ಥ ಸುಬ್ರಮಣಿ ಕಲ್ಲುಗುಂಡಿ ಉಚಿತವಾಗಿ ವಿತರಿಸಿದ್ದಾರೆ.
ವೇಣುಪ್ರಸಾದ್ ರಿಗೆ ಆರಂಭದಿಂದಲೂ ವಿವಿಧ ರೀತಿಯ ಸಹಕಾರ ನೀಡುತ್ತಿರುವ ಇವರು, ಈ ಹಿಂದೆಯೂ ಇವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ದೊರಕಲು ಸಹಕರಿಸಿದ್ದರು.
3 ವರ್ಷಗಳ ಹಿಂದೆಯೂ ಸುಬ್ರಮಣಿಯವರು ವೇಣುಪ್ರಸಾದ ರಿಗೆ ಇಂತಹ ಸಾಧನ ಸಲಕರಣೆ ನೀಡಿದ್ದರು. ನಿರಂತರವಾಗಿ ಇದನ್ನು ಉಪಯೋಗಿಸುತ್ತಿದ್ದರಿಂದ ಸಲಕರಣೆ ತುದಿ ಭಾಗ ತುಂಡಾಗಿತ್ತು.
ಸುಬ್ರಮಣಿಯವರು ಈಗಾಗಲೇ ವಿಶೇಷಚೇತನ ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ಅಗತ್ಯ ಸೇವೆ ಮಾಡುತ್ತಿದ್ದಾರೆ.
ವಿಶೇಷ ಚೇತನ ವಿದ್ಯಾರ್ಥಿ ವೇಣುಪ್ರಸಾದ್ ಗೆ ಸುಲಭವಾಗಿ ನಡೆಯಲು ಉಚಿತ ಸಾಧನ ಸಲಕರಣೆ ವಿತರಣೆ
