ಕೆ ಎಸ್ ಆರ್ ಟಿಸಿ ಬಸ್ಸು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುತ್ತೂರಿನ ಮುರ ಎಂಬಲ್ಲಿಂದ ಗುರುವಾರ ವರದಿಯಾಗಿದೆ.
ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಅಬ್ದುಲ್ ಕುಂಞ (65) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.ಅಬ್ದುಲ್ ಕುಂಞಯವರು ಮುರದ ಮೆಡಿಕಲ್ ಶಾಪ್ ಗೆ ಬಂದಿದ್ದು, ವಾಪಸ್ಸು ರಸ್ತೆ ದಾಟಿ ಕೆದಿಲ ರಸ್ತೆಯತ್ತ ಹೋಗುತ್ತಿರುವಾಗ ಅವರ ಬೈಕ್ ಗೆ ಬಸ್ಸು ಢಿಕ್ಕಿ ಹೊಡೆದಿದೆ. ಬಸ್ಸು ಮಾಣಿಯಿಂದ ಪುತ್ತೂರಿನತ್ತ ಹೋಗುತ್ತಿತ್ತು.
ಗಾಯಾಳು ಸವಾರನನ್ನು ಸ್ಥಳೀಯರ ನೆರವಿನಿಂದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.ಆದರೆ ಅಷ್ಟರಲ್ಲಿಯೇ ಅವರು ಇಹಲೋಕ ತ್ಯಜಿಸಿದರು.