ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ )ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯಕ್ಷೇತ್ರದ ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಶಾಲೆಗೆ 42500 ಮೌಲ್ಯದ 5ಜೊತೆ ಬೆಂಚು ಡೆಸ್ಕ್ ಅನ್ನು ವಿತರಣೆ ಮಾಡುವ ಕಾರ್ಯಕ್ರಮ ಇಂದು ನಡೆಯಿತು ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರು ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸುಜ್ಞಾನನಿಧಿ ಶಿಷ್ಯವೇತನ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹೀಗೆ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಕುರಿತುಮಾಹಿತಿ ನೀಡಿದರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಧ್ಯಕ್ಷರಾದ ಎಬಿ ನವೀನ್ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳ ಕಜೆ ನಿಕಟ ಪೂರ್ವ ಅಧ್ಯಕ್ಷರಾದ ತಿಮ್ಮಯ್ಯ ಮೆತ್ತಡ್ಕ ಶಾಲಾ ಮುಖ್ಯೋಪಾಧ್ಯಾಯರಾದ ಅರುಣ್ ಕುಮಾರ್ ವಲಯ ಮೇಲ್ವಿಚಾರಕರಾದ ಗಂಗಾಧರ್ ಒಕ್ಕೂಟದ ಪದಾಧಿಕಾರಿಗಳು ಎಸ್ ಡಿಎಂ ಸಿ ಸದಸ್ಯರುಗಳು ಸೇವಾ ಪ್ರತಿನಿಧಿ ಸುಂದರ ಬಾಜಿ ನಡ್ಕ ಅಧ್ಯಾಪಕ ವೃಂದದವರು ಶಾಲಾ ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು