ಸಂಪಾಜೆಯಲ್ಲಿ ನಡೆದ ಅನಸ್ ಹಸೈನಾರ್ ರವರ ಮದುವೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಲೋತ್ಸವದಲ್ಲಿ ಇಂಗ್ಲೀಷ್ ಮತ್ತು ಮಲಯಾಳಂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೆರೆಮೂಲೆ ಹನೀಫ್ ರವರ ಸುಪುತ್ರ ಸುಳ್ಯ ಅನ್ಸಾರಿಯ ಎಜ್ಯುಕೇಶನ್ ಸೆಂಟರ್ ನ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಸ್ ರವರನ್ನು ಕೆರೆಮೂಲೆ ಕುಟುಂಬಸ್ಥರ ಪರವಾಗಿ ಹಿರಿಯರಾದ ಹಾಜಿ ಅಬ್ದುಲ್ ಖಾದರ್ ಕೆರೆಮೂಲೆ ಶಾಲು ಹೊದಿಸಿ ಸನ್ಮಾಸಿದರು.
ಈ ಸಂದರ್ಭದಲ್ಲಿ ಮೀಫ್ ಉಪಾಧ್ಯಕ್ಷ ಕೆ ಎಂ ಮುಸ್ತಾಫ ಮಾತನಾಡಿ ಕುಟುಂಬದ ಸಮ್ಮುಖದಲ್ಲಿ ಪ್ರತಿಭೆಯನ್ನು ಗುರುತಿಸಿದಾಗ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು. ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕಾರ್, ಗ್ರೀನ್ ವ್ಯೂವ್ ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಇಬ್ರಾಹಿಂ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಖಲಂದರ್ ಎಲಿಮಲೆ, ಹನೀಫ್ ಕೆರೆಮೂಲೆ, ರಶೀದ್ ಕೆರೆಮೂಲೆ, ಅಬ್ಬಾಸ್ ಕೆರೆಮೂಲೆ, ಹಮೀದ್ ಕೆರೆಮೂಲೆ, ಶಫೀಕ್ ಕೆರೆಮೂಲೆ, ಹಸೈನಾರ್ ಸಂಪಾಜೆ, ಶಬೀರ್ ಪುತ್ತೂರು, ಶಫೀಕ್ ಹಳೆಗೇಟು ಮೊದಲಾದವರು ಉಪಸ್ಥಿತರಿದ್ದರು