ಶ್ರದ್ಧಾ ಭಕ್ತಿಯ ಸೇವೆಯಿಂದ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಸಾಧ್ಯ,ಇಲ್ಲಿನ ಜನರ ಒಗ್ಗಟ್ಟು ಶ್ರದ್ಧಾ ಭಕ್ತಿಯ ಸೇವೆ ಮತ್ತು ಭಕ್ತರು ತಮ್ಮ ಹೃದಯದಲ್ಲಿ ಭಕ್ತಿಯ ದೀವಿಗೆ ಹಚ್ಚಿದ್ದರಿಂದಲೇ ಬಜಪ್ಪಿಲ ಕ್ಷೇತ್ರ ಇಷ್ಟು ಸುಂದರವಾಗಿ ಪುನರ್ ನಿರ್ಮಾಣವಾಗಿ ಇಂದು ಕ್ಷೇತ್ರ ಪ್ರಜ್ವಲಿಸುತ್ತಿದೆ. ನೀವೆಲ್ಲರೂ ಸಂಕಲ್ಪ ಮಾಡಿಕೊಂಡಂತೆ ೧೯೫ ದಿನಗಳಲ್ಲಿ ದೈವಸ್ಥಾನ ನಿರ್ಮಾಣ ಆಗಿರುವುದರಿಂದ ಮಾನವ ಜನ್ಮ ಸಾರ್ಥಕ್ಯವನ್ನು ಕಂಡಂತಾಗಿದೆ'' ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಬಜಪ್ಪಿಲ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು. ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿ,
ಬಜಪ್ಪಿಲ ಕ್ಷೇತ್ರದ ಮಣ್ಣಿನಲ್ಲಿ ವಿಶೇಷ ಶಕ್ತಿ ಇದೆ” ಎಂದು ಹೇಳಿದರು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದರು ಮಾತನಾಡಿ, ಬಜಪ್ಪಿಲ ಕ್ಷೇತ್ರ ಉತ್ತಮವಾಗಿ ಅಭಿವೃದ್ಧಿಯಾಗಿದೆ. ಇಲ್ಲಿ ಶಕ್ತಿ ಪ್ರತಿಯೊಬ್ಬರಿಗೂ ಯುಕ್ತಿಯಾಗಿ ಸಿಗಲಿ'' ಎಂದು ಹೇಳಿದರು. ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಿ,
ಬಜಪ್ಪಿಲ ಕ್ಷೇತ್ರ ಜೀರ್ಣೋದ್ಧಾರಕ್ಕೆ ಸಂಕಲ್ಪ ಕೈಗೊಂಡ ಬಳಿಕ ಎಲ್ಲರೂ ಕೂಡಾ ಶ್ರಮ ಪಟ್ಟು ದುಡಿದ ಪರಿಣಾಮ ಕ್ಷೇತ್ರ ಸುಂದರವಾಗಿ ನಿರ್ಮಾಣಗೊಂಡಿದೆ ಎಂದು ಹೇಳಿದರಲ್ಲದೆ, ಸುಳ್ಯ ಸೀಮೆ ದೈವಸ್ಥಾನವಾಗಿರುವ ಇಲ್ಲಿ ವರ್ಷಕ್ಕೆ ಎರಡು ಜಾತ್ರೆ ಸೇರಿದಂತೆ, ವರ್ಷದಲ್ಲಿ ೨೫ ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಮೇನಾಲ ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರರಾದ ಗುಡ್ಡಪ್ಪ ರೈ ಮೇನಾಲ, ಸುಳ್ಯ ಶ್ರೀಪಾದ ಕನ್ಸಲ್ಟನ್ಸಿ ಸಿವಿಲ್ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ, ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬಾಳೆಕೋಡಿ, ಕೋಶಾಧಿಕಾರಿ ಮೇದಪ್ಪ ಗೌಡ ಪೇರಾಲುಮೂಲೆ, ಕಾರ್ಯದರ್ಶಿಗಳಾದ ದಾಮೋದರ ಮಿತ್ತಪೇರಾಲು, ದಿನೇಶ್ ಗಬ್ಬಲಡ್ಕ, ಸ್ವಾಗತ ಸಮಿತಿ ಸಂಚಾಲಕ ಜಯರಾಮ ಗೌಡರಮನೆ, ದೈವಸ್ಥಾನದ ಅರ್ಚಕರಾದ ದಿನೇಶ್ ರೈ ಪೇರಾಲು – ದರ್ಖಾಸು ವೇದಿಕೆಯಲ್ಲಿ ಇದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು.ಕಾರ್ಯದರ್ಶಿ ಮಂಜುನಾಥ ಪೇರಾಲು ಪ್ರಾಸ್ತಾವಿಕ ಮಾತುಗಳನ್ನಾಡಿ ಬಜಪ್ಪಿಲ ಕ್ಷೇತ್ರದ ಇತಿಹಾಸವನ್ನು ವಿವರಿಸಿದರು. ಜೀರ್ಣೋದ್ಧಾರ ಕೋಶಾಧಿಕಾರಿ ವಂದಿಸಿದರು. ಶಿಕ್ಷಕ ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯರಿಂದ ಸಾಮಸ್ಕೃತಿಕ ಸೌರಭ ಹಾಗೂ ಬಳಿಕ ಡ್ಯಾನ್ಸ್ ಬೀಟ್ಸ್ ಜೀವನ್ ಟಿ.ಎನ್. ಬೆಳ್ಳಾರೆ ಇವರ ನಿರ್ದೇಶನ ತಂಡದಿಂದ ನೃತ್ಯ ಸಂಭ್ರಮ ನಡೆಯಿತು.