ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ. ಕೊಂಡ್ಯಾಡಿಯ ಮಹಿಳೆಯೋರ್ವೆ ಕಡಬ ಪೊಲೀಸರಿಗೆ ದೂರು ನೀಡಿದ್ದು, ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದೆ. ದನ ಸಂಜೆಯಾದರೂ ಮರಳಿ ಮನೆಗೆ ಬಾರಲಿಲ್ಲ. ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ರ ತೋಟದಲ್ಲಿ ಕಾಲಿಗೆ ಗಂಭೀರ ಗಾಯವಾದ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೇಯಲು ಬಿಟ್ಟಿದ ದನದ ಕಾಲಿಗೆ ಕಡಿದ ಕಟುಕ
