ಅರಂತೋಡು ಗ್ರಾಮದ ಕರಿಂಬಿ ಚಿನ್ನಪ್ಪ ಮಾಸ್ತರ್‌ರ ಪತ್ನಿ , ನಿವ್ರತ್ತ. ಶಿಕ್ಷಕಿ ಪುಷ್ಪಾವತಿ (68 )ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುಷ್ಪಾವತಿಯವರು ಪೆರುವಾಜೆ, ಗಾಂಧಿನಗರ, ತೊಡಿಕಾನ, ಸೋಣಂಗೇರಿ ಶಾಲೆಗಳಲ್ಲಿ ಶಿಕ್ಷಕಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತಿ, ಪುತ್ರ ಪ್ರಹ್ಲಾದ್ ಕೆ.ಸಿ., ಪುತ್ರಿ ಡಾ. ಪಲ್ಲವಿ ಪ್ರಶಾಂತ್ ತಂಟೆಪ್ಪಾಡಿ, ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.