ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿ ಕ್ಷೇತ್ರದಲ್ಲಿ ಕೆವಿಜಿಯವರು ಮಾಡಿರುವ ಸಾಧನೆ ಶ್ರೇಷ್ಠ ಕೆಲಸ : ಪ್ರೊ’ಕೃಷ್ಣ ಗೌಡ

ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿ ಕ್ಷೇತ್ರದಲ್ಲಿ ಕೆವಿಜಿಯವರು ಮಾಡಿರುವ ಸಾಧನೆ ಶ್ರೇಷ್ಠ ಕೆಲಸವಾಗಿದೆ ಎಂದು ಮೈಸೂರು ಸಂತ ಪಿಲೋಮಿನ ಕಾಲೇಜಿನ‌ ನಿವೃತ್ತ ಪ್ರಾಂಶುಪಾಲ ಮತ್ತು ಖ್ಯಾತ ವಾಗ್ಮಿ ಕ್ರಷ್ಣೇ ಗೌಡ ಹೇಳಿದರು.
ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತ್ಯೋತ್ಸವ’ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ’ಯಲ್ಲಿ ಕೆವಿಜಿ ಸಾಧನಾಶ್ರೀ ಮತ್ತು ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಅವರು ಮಾತನಾಡಿದರು. ಅವರು ಶೈಕ್ಷಣಿಕ ಕಾಂತ್ರಿ ಮಾಡುವ ಮೂಲಕ ಅದ್ಭುತವನ್ನು ಸಾಧಿಸಿದ್ದಾರೆ. ಉನ್ನತ ಶಿಕ್ಷಣ ಪಡೆಯದೇ ಸಮಾಜಕ್ಕೆ ಶಿಕ್ಷಣ ನೀಡಿದರು. ತನ್ನ ಬದುಕಿನ ಶ್ರಮದಿಂದ ಗುರಿಯಿಂದ ತಾವು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ಅನ್ನದಾತರಾದರು. ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಮಾರಂಭವನ್ನು ಉದ್ಘಾಟಿಸಿದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ.ಎನ್‌.ಎ.ಜ್ಞಾನೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ರಾಜು ಪಂಡಿತ್, ಕೋಶಾಧಿಕಾರಿ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ,ಡಾ.ಎಂ.ವಿ ಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಹಾಗು ಹಿರಿಯ ವೈದ್ಯರಾದ ಡಾ.ಎಂ.ವಿ. ಶಂಕರ ಭಟ್ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ರವಿಕಾಂತ್ ಜಿ.ಒ (ವೈದ್ಯಕೀಯ), ಕಸ್ತೂರಿ ಶಂಕರ್(ಸ್ವ ಉದ್ಯೋಗ), ಆಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ (ಕ್ರೀಡೆ), ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಮತ್ತು ಹೈನುಗಾರಿಕೆ) ಅವರಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಿರೀಶ್ ನಾರ್ಕೋಡು, ವೀರಪ್ಪ ಗೌಡ , ಚಂದ್ರಾಕ್ಷಿ ಜೆ ರೈ ಪೂರ್ಣಿಮಾ ಮಡಪ್ಪಾಡಿ, ಕೆ.ಟಿ.ವಿಶ್ವನಾಥ್, ಡಿ.ಟಿ.ದಯಾನಂದ, ಡಾ.ಹರ್ಷವರ್ಧನ್. ಕೆ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಡಾ.ಲಕ್ಷ್ಮೀಶ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಹರೀಶ್ ಬಂಟ್ವಾಳ್ ಸದಸ್ಯತ್ವ ಅಭಿಯಾನದ ಮಾಹಿತಿ ನೀಡಿದರು. ಚಂದ್ರಾವತಿ ಬಡ್ಡಡ್ಕಮತ್ತು ಲತಾಶ್ರೀ ಸುಪ್ರೀತ್ ಮೋಂಟಡ್ಕ ನಿರೂಪಿಸಿದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top