ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ವತಿಯಿಂದ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಹಾರಾರ್ಪಣೆ, ಸಂಸ್ಮರಣೆ ಕಾರ್ಯಕ್ರಮ

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮರ ಸುಳ್ಯದ ಅಮರ ಶಿಲ್ಪಿ ಎಂದು ಖ್ಯಾತ ನಾಮರಾದ ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ವತಿಯಿಂದ ಕುರುಂಜಿಭಾಗ್‌ನ ಡಾ.ಕೆ.ವಿ.ಜಿ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಡಾ.ಕುರುಂಜಿಯವರ ಸಂಸ್ಮರಣೆ ಮಾಡಿ ಅವರ ಗುಣಗಾನ ಮಾಡಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಕಮಿಟಿ ಬಿ ಇದರ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಅವರು ಮಾತನಾಡಿ
ಡಾ.ಕುರುಂಜಿ ವೆಂಕಟ್ರಮಣ ಗೌಡರು ಸಮಾಜಕ್ಕೆ ಒರ್ವ ಆದರ್ಶ ವ್ಯಕ್ತಿಯಾಗಿ ಸಾವಿರಾರು ಮಂದಿಗೆ ಶಿಕ್ಷಣ ನೀಡಿ ಶಿಕ್ಷಣ ಬ್ರಹ್ಮ, ಎಂದು ಕರೆಯಿಸಿಕೊಂಡಿದ್ದಾರೆ.ಅನೇಕ ಮಂದಿಗೆ ಉದ್ಯೋಗ ನೀಡಿ ಅನ್ನದಾತರಾದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆವಿಜಿ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ 2025ನೇ ವರ್ಷದ ಕ್ಯಾಲೆಂಡರನ್ನು ಡಾ.ಕೆ.ವಿ.ರೇಣುಕಾಪ್ರಸಾದ್ ಬಿಡುಗಡೆ ಮಾಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಕಮಿಟಿ ಬಿಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆ‌ರ್. ಪ್ರಸಾದ್‌, ನಿರ್ದೇಶಕ ಮೌರ್ಯ ಆ‌ರ್.ಕುರುಂಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಪ್ರಮುಖರಾದ, ಡಾ.ಮನೋಜ್, ಡಾ.ಎಂ.ಎಂ.ದಯಾಕರ್, ದಿನೇಶ್ ಮಡ್ತಿಲ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ ಪಿ.ಬಿ.ಸುಧಾಕರ ರೈ ಸಂತೋಷ್ ಜಾಕೆ, ಕೆ.ಎಂ.ಮುಸ್ತಫ, ಎಸ್.ಸಂಶುದ್ದೀನ್, ಶಾಫಿ ಕುತ್ತಮೊಟ್ಟೆ, ಸುನಿಲ್ ಕೇರ್ಪಳ, ಶೈಲೇಶ್ ಅಂಬೆಕಲ್ಲು ಕೆವಿಜಿ ಶಿಕ್ಷಣ ಸಂಸ್ಥೆಗಳ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಉದ್ಯೋಗಿಗಳಾದ ಡಾ.ಸುರೇಶ್, ಡಾ.ಮೋಕ್ಷಾ ನಾಯಕ್, ಯಶೋಧಾ ರಾಮಚಂದ್ರ ಮಾಧವ ಬಿ.ಟಿ, ಪ್ರಸನ್ನ ಕಲಾಜೆ, ಭವಾನಿಶಂಕರ ಅಡ್ತಲೆ ಇತರರು ಉಪಸ್ಥಿತರಿದ್ದರು.

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top